Ad Widget .

ಕಾಮನ್‌ವೆಲ್ತ್ ಕ್ರೀಡಾಕೂಟ; ಮತ್ತೊಂದು ಚಿನ್ನದ ಬೇಟೆಯಾಡಿದ ಭಾರತ

ಸಮಗ್ರ ನ್ಯೂಸ್: ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಬಂದಿದೆ. ಜೆರಿಮಿ‌ ಲಾಲ್ ರಿನ್ನುಂಗಾ 67 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಈ ಪದಕವನ್ನು ಗಳಿಸಿ ಕೊಟ್ಟಿದ್ದಾರೆ.

Ad Widget . Ad Widget .

ಈ ಮೊದಲು ಮೀರಾಬಾಯಿ ಚಾನು, ಮೊದಲ ಚಿನ್ನದ ಪದಕವನ್ನು ಗಳಿಸಿದ್ದು ಇದೀಗ, ಜೆರಿಮಿ ಲಾಲ್ ರಿನ್ನುಂಗಾ ಎರಡನೇ ಚಿನ್ನದ ಪದಕವನ್ನು ಗೆದ್ದಿದ್ದಾರೆ. 19 ವರ್ಷದ ಜೆರಿಮಿ ಒಟ್ಟು 300 ಕೆಜಿ ತೂಕವನ್ನು ಎತ್ತುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾದರು.

Ad Widget . Ad Widget .

ಈಗಾಗಲೇ ಬಿಂದ್ಯಾ ರಾಣಿ ದೇವಿ, ಸಂಕೇತ್ ಸರ್ಗರ್ ಬೆಳ್ಳಿ, ಗುರುರಾಜ ಪೂಜಾರಿ ಕಂಚಿನ ಪದಕವನ್ನು ಗಳಿಸಿದ್ದು, ಭಾರತಕ್ಕೆ ಈವರೆಗೆ ಎರಡು ಚಿನ್ನ ಎರಡು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಬಂದಂತಾಗಿದೆ.

Leave a Comment

Your email address will not be published. Required fields are marked *