ಸಮಗ್ರ ನ್ಯೂಸ್: “ಡೆಲ್ಮಾ ಎಂಟರ್‌ಪ್ರೈಸಸ್’’ ಹೆಸರಿನಲ್ಲಿ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸ್ಥಳೀಯ ದೇವಸ್ಥಾನ, ಶಾಲೆ, ಮತ್ತು ಮನೆಗೆಳ ಕಟ್ಟಡಗಳಿಗೆ ತೊಂದರೆ ಉಂಟಾಗುತ್ತಿರು ಬಗ್ಗೆ 2ನೇ ಭಾರೀ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ” ಡೆಲ್ಮಾ ಎಂಟರ್‌ಪ್ರೈಸಸ್ ” ಹೆಸರಿನ ಅಕ್ರಮ ಕಲ್ಲುಕೋರೆ ಕೆಲಸ ನಡೆಯುತ್ತಿರುವುದು ಈಗಾಗಲೇ ಸುದ್ದಿಯಲ್ಲಿದೆ. ಈ ಕಲ್ಲು ಕೋರೆ ನಡೆಸಲು ಅಸುಪಾಸಿನ ಜನರ ಮತ್ತು ಗ್ರಾಮಸ್ಥರ ಅಕ್ರಮ ಸಹಿಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಿಗೆಯನ್ನು ಪಡೆದಿರುವ ಬಗ್ಗೆ ದೂರು ಕೇಳಿಬಂದಿತ್ತು .
ಇನ್ನೂ ಈ ಮೊದಲು ಪರವಾನಿಗೆ ಮಾಡುವ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಥವಾ ಭಜನಾ ಮಂಡಳಿಯವರ ಬಳಿ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ. ಮರ್ಕಂಜ ಗ್ರಾಮವು ಸುಳ್ಯ ತಾಲೂಕಿನಲ್ಲಿಯೇ ಪಂಚ ಸ್ಥಾಪನೆಯ ದೈವ ದೇವರುಗಳನ್ನು ಹೊಂದಿರುವ ಏಕೈಕ ಗ್ರಾಮವಾಗಿರುತ್ತದೆ. ಅದರೆ ದೇವಾಲಯಕ್ಕೆ ಹೋಗುವ ದಾರಿಯು ಅತೀ ಇಕ್ಕಟ್ಟಾದ ಮತ್ತು ಮಣ್ಣಿನ ದಾರಿಯಾಗಿದೆ. ಅದರೆ ಕೋರೆಯಿಂದ ಲಾರಿಗಳು ಇದೇ ಮಾರ್ಗದ ಮುಖಾಂತರ ನಿರಂತರವಾಗಿ ಮತ್ತು ಅತಿ ವೇಗವಾಗಿ ಕಲ್ಲನ್ನು ಮತ್ತು ಕಲ್ಲಿನ ಹುಡಿಯನ್ನು ಹೇರಿಕೊಂಡು ಹೋಗುತ್ತಿದೆ. ಇದರಿಂದ ಶಾಲಾ ಮಕ್ಕಳು, ಅಂಗನವಾಡಿಗೆ ಹೋಗುವ ಅತೀ ಚಿಕ್ಕ ಮಕ್ಕಳು, ಭಕ್ತಾದಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ದಾರಿ ನಡೆಯುವ ಪರಿಸ್ಥಿತಿ ಎದುರಾಗಿದೆ.
ಇದು ಅಲ್ಲದೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡೂರು ಮರ್ಕಂಜದ ನೂರಾರು ವಿದ್ಯಾರ್ಥಿಗಳು ಈ ದಾರಿಯ ಮೂಲಕವೇ ನಡೆದುಕೊಂಡು ಹೋಗುವ ಕಾರಣ ಮಕ್ಕಳ ಪೋಷಕರಲ್ಲಿಯೂ ಭಯದ ವಾತಾವರಣ ಉಂಟಾಗಿದೆ.
ದೇವಸ್ಥಾನದ ಗರ್ಭಗುಡಿಯಲ್ಲಿ ಬಿರುಕುಬಿಟ್ಟಿದ್ದು , ಭಕ್ತಾದಿಗಳಲ್ಲಿ ಭಯದ ವಾತಾವರಣ ಉಂಟಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುತ್ತದೆ . ಇದರಿಂದಾಗಿ ದೇವಸ್ಥಾನದ ಸಂಬಂದಪಟ್ಟ ಮಂಡಳಿಗಳಿಗೂ ಸಂಧಿಘ ಪರಿಸ್ಥಿತಿ ಎದುರಾಗಿದೆ . ಈ ಮೊದಲು ದೇವಸ್ಥಾನದ ಗರ್ಭಗುಡಿಯಲ್ಲಿ ಬಿರುಕುಬಿಟ್ಟಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಅದರ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ
ದೇವಸ್ಥಾನವು ಮಿನುಂಗೂರಿನ ತುತ್ತ ತುದಿಯಲ್ಲಿದ್ದು ಆ ಪ್ರದೇಶವು ಕಲ್ಲು ಬಂಡೆಗಳಿಂದ ಕೂಡಿದ ಪ್ರದೇಶವಾಗಿರುವುದರಿಂದ ಸದ್ರಿ ಕಲ್ಲು ಭೂಮಿಯು ಕೋರೆಯಲ್ಲಿ ನಡೆಯುವ ಅತಿ ಭೀಕರ ಸ್ಪೋಟದ ಪರಿಣಾಮವಾಗಿ ದೇವಸ್ಥಾನದ ಗರ್ಭ ಗುಡಿ ಕಂಪನಗೊಳ್ಳುವದರಿಂದ ಹಾಗೂ ಇತರೆ ಕಟ್ಟಡಗಳು ಬಿರುಕುಬಿಟ್ಟಿರುತ್ತದೆ.
ಆದುದರಿಂದ ಸಂಬಂದ ಪಟ್ಟ ಅಧಿಕಾರಿಗಳು ಈ ಮೇಲ್ಕಂಡ ವಿಷಯವನ್ನು ಪರಿಗಣಿಸಿ ಆದಷ್ಟು ಬೇಗ ಸ್ಥಳಕ್ಕೆ ಆಗಮಿಸಿ ಭಕ್ತಾದಿಗಳಿಗೆ ಉಂಟಾಗುವ ಸಮಸ್ಯೆ ಮತ್ತು ದೇವಸ್ಥಾನಕ್ಕೆ ಉಂಟಾದ ಹಾನಿಯನ್ನು ಪರಿಶೀಲಿಸಬೇಕಾಗಿ ವಿನಂತಿ. ಇದು ಅಲ್ಲದೆ ಈ ಮೊದಲು ಸಲ್ಲಿಸಿದ ಅರ್ಜಿಯ ವಿಚಾರವನ್ನು, ಪರವಾನಿಗೆಯ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಕೋರೆಯ ವಿರುದ್ಧ ನ್ಯಾಯಯುತವಾಗಿ ತನಿಖೆ ನಡೆಸಿ ಪಂಚಸ್ಥಾಪನೆಯ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ ನ್ಯಾಯ ಒದಗಿಸಿಕೊಡಬೇಕಾಗಿ ಬೇಡಿಕೊಳ್ಳುತ್ತಿದ್ದೇವೆ.
ತಪ್ಪಿದಲ್ಲಿ ಮರ್ಕಂಜ ಗ್ರಾಮ ಪಂಚಾಯತ್ ಮುಂಭಾಗ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.