ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಠಾಣೆಯಿಂದ ವರ್ಗಾವಣೆಗೊಂಡಿರುವ ಹೆಡ್ ಕಾನ್ಸ್‌ಟೇಬಲ್ ಬಾಲಕೃಷ್ಣರನ್ನು ಅಮಾನತುಗೊಳಿಸಿ ತನಿಖೆ ನಡೆಸಲು ಪುನಿತ್ ಕೆರೆಹಳ್ಳಿ ಮನವಿ ಮಾಡಿದ್ದಾರೆ. ಇಂದು ಬೆಳ್ಳಾರೆಯಲ್ಲಿ ಠಾಣೆಗೆ ಧಾವಿಸಿದ ಅವರು ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಜೊತೆಗೆ ಠಾಣಾಧಿಕಾರಿ ಸುಹಾಸ್ ಆರ್ ರವರಿಗೆ ಮನವಿ ಸಲ್ಲಿಸಿದರು.
ಬಾಲಕೃಷ್ಣರವರು ಪ್ರವೀಣ್ ಹತ್ಯೆ ನಡೆದ ಎರಡೇ ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದ್ದು, ಸರ್ಕಾರಿ ಅಂಬ್ಯುಲೆನ್ಸ್ ಗೆ ಫೋನ್ ಮಾಡುವ ಬದಲು ಕೋಮುಗಲಭೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ವ್ಯಕ್ತಿಯ ಅಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಇದರಿಂದ ಬಾಲಕೃಷ್ಣರಿಗೆ ಪ್ರವೀಣ್ ಹತ್ಯೆ ನಡೆಯುವ ವಿಚಾರ ಮೊದಲೇ ತಿಳಿದಿರುವ ಅನುಮಾನ ಕಾಡುತ್ತದೆ. ಅಲ್ಲದೇ ಈ ಪೊಲೀಸ್ ಪೇದೆ ಈ ಹಿಂದೆಯೂ ಹಲವಾರು ಹಿಂದೂ ಯುವಕರಿಗೆ ವೃಥಾ ಕೇಸು ದಾಖಲಿಸಿ ರೌಡಿಶೀಟರ್ ಪಟ್ಟ ಕಟ್ಟಿದ್ದಾರೆ. ಇದಲ್ಲವನ್ನು ಗಮನಿಸಿದರೆ ಬಾಲಕೃಷ್ಣರಿಗೆ ಪ್ರವೀಣ್ ಹತ್ಯೆಯ ಕುರಿತಂತೆ ಗೊತ್ತಿತ್ತು ಎಂದವರು ಆರೋಪಿಸಿದ್ದಾರೆ.
ಆದ್ದರಿಂದ ಬಾಲಕೃಷ್ಣರನ್ನು ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಹಿಂಜಾವೇ, ಭಜರಂಗದಳ ಒತ್ತಾಯಿಸಿದೆ.