Ad Widget .

ಎಂಟು ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಬಲಿ

ಶಿವಮೊಗ್ಗ: ಕಳೆದ ಎಂಟು ತಿಂಗಳಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆಯೊಂದು ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ.

Ad Widget . Ad Widget .

ಮೇಗರವಳ್ಳಿಯ ಕೆಪಿ ರಸ್ತೆಯ ಸಂಜೀವ ಅವರ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿವೆ.

Ad Widget . Ad Widget .

ಇದರಿಂದ ಆ ಕುಟುಂಬದವರು ಕಂಗಾಲಾಗಿದ್ದಾರೆ. ಹೌದು, ಸಂಜೀವ ಅವರ ಪುತ್ರಿ ಅಂಗನವಾಡಿ ಕಾರ್ಯಕರ್ತೆ ಪದ್ಮಾವತಿ ಅನಾರೋಗ್ಯದ ಕಾರಣ ಬುಧವಾರ ಮೃತಪಟ್ಟಿದ್ದರು. ಎರಡು ತಿಂಗಳ ಹಿಂದೆ ಅವರ ಮೊದಲ ಪುತ್ರಿ ಪೂರ್ಣಿಮಾ ಸಾವನ್ನಪ್ಪಿದ್ದರು. ಈ ಮೊದಲು ಸಂಜೀವ ಅವರ ತಾಯಿ ಮೃತಪಟ್ಟಿದ್ದರು. ಗುರುವಾರ ಬೆಳಗಿನ ಜಾವ ಸಂಜೀವ ಕೂಡ ಸಾವನ್ನಪ್ಪಿದ್ದಾರೆ.

ಬುಧವಾರ ಎರಡನೇ ಪುತ್ರಿ ಪದ್ಮಾವತಿ ಅವರು ಮೃತಪಟ್ಟ 12 ಗಂಟೆ ಅವಧಿಯಲ್ಲೇ ಸಂಜೀವ ಅವರು ಕೂಡ ಮೃತಪಟ್ಟಿದ್ದಾರೆ. ಅವರು ಪತ್ನಿ, ಪುತ್ರ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *