Ad Widget .

ಚಿಕನ್ ಅಂಗಡಿಯೇ ಪ್ರವೀಣ್ ಪ್ರಾಣಕ್ಕೆ ಕುತ್ತಾಯಿತೇ? ಮತ್ತೊಂದು ಶಾಕಿಂಗ್ ಮಾಹಿತಿ…

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್​ ನೆಟ್ಟಾರ್​ಗೆ ಮೊದಲೇ ಸಾವಿನ ಸುಳಿವು ಸಿಕ್ಕಿತ್ತಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ. ಇದಕ್ಕೆ ಕಾರಣ, ಪ್ರವೀಣ್​ ಸಹೋದರ ರಂಜಿತ್​ ನೀಡಿರುವ ಸ್ಫೋಟಕ ಮಾಹಿತಿ. ಕಳೆದ ಹಲವು ದಿನಗಳಿಂದ ಪ್ರವೀಣ್​ಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ರಂಜಿತ್ ಹೇಳಿದರು.

Ad Widget . Ad Widget .

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಕೂಡಲೇ ಕರೆಗಳು ಬರುತ್ತಿದ್ದವು. ಈ ಬಗ್ಗೆ ಬೆಳ್ಳಾರೆ ಪೊಲೀಸರಿಗೆ ತಿಳಿಸಲಾಗಿತ್ತು ಎಂದಿದ್ದಾರೆ.

Ad Widget . Ad Widget .

ಬೆಳ್ಳಾರೆಯಲ್ಲಿ ದೊಡ್ಡ ಮಟ್ಟದಲ್ಲಿ ಚಿಕನ್, ಮಟನ್ ದಂಧೆ ನಡೆಯುತ್ತಿದೆ. ಚಿಕನ್, ಮಟನ್​, ಮೀನು ಮಾರಾಟ ಮಾಡುವ ದಂಧೆ ಮುಸ್ಲಿಮರ ಹಿಡಿತದಲ್ಲಿದೆ. ಹಲವು ದಿನಗಳ ಹಿಂದೆ ಹಿಂದೂಗಳೂ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದರಿಂದಲೇ ಈ ಗಲಾಟೆ ಶುರುವಾಗಿರುವ ಸಂದೇಶವನ್ನು ವ್ಯಕ್ತಪಡಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ರಂಜಿತ್​, ಒಂಬತ್ತು ತಿಂಗಳ ಹಿಂದೆಯಷ್ಟೇ ಪ್ರವೀಣ್​ ಚಿಕನ್ ಅಂಗಡಿ ತೆರೆದಿದ್ದರು. ಇದೇ ಕೊಲೆಗೆ ಕಾರಣ ಇರಬಹುದು. ಇದರ ಹಿಂದೆ ಬಹು ದೊಡ್ಡ ಜಾಲವೇ ಇದೆ. ಝಾಕೀರ್ ಮತ್ತು ಶಫೀಕ್ ಪ್ರಮುಖ ಆರೋಪಿಗಳಲ್ಲ. ಇವರ ಹಿಂದೆ ಇರುವುದು ದೊಡ್ಡ ಜಾಲವಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *