ಪ್ರವೀಣ್ ಹತ್ಯೆ ಪ್ರಕರಣ ಹಿನ್ನಲೆ; ಪೊಲೀಸ್ ಇಲಾಖೆಯ ಅಧಿಕಾರಿಗಳ ಎತ್ತಂಗಡಿ| ಬೆಳ್ಳಾರೆ ಮತ್ತು ಸುಬ್ರಮಣ್ಯಕ್ಕೆ ನೂತನ ಪಿಎಸೈಗಳ ನೇಮಕ

ಸಮಗ್ರ ನ್ಯೂಸ್: ಕರಾವಳಿಯಲ್ಲಿ 10 ದಿನದಲ್ಲೆ ನಡೆದ ಮೂರು ಕೊಲೆಗಳ ಪರಿಣಾಮ ಇದೀಗ ಸುಳ್ಯ ಬೆಳ್ಳಾರೆಯ ಗ್ರಾಮಾಂತರ ಠಾಣೆಯ ಪಿಎಸ್ ಐ ರುಕ್ಮಯ್ಯ ನಾಯ್ಕರನ್ನು ವರ್ಗಾವಣೆ ಮಾಡಲಾಗಿದೆ.

Ad Widget ... ..

ಕಳೆದ ಎರಡು ದಿನಗಳ ಹಿಂದೆಯಷ್ಟೆ ಬೆಳ್ಳಾರೆಯ ನೆಟ್ಟಾರಿನ ಪ್ರವೀಣ್ ಹತ್ಯೆಯ ಹಿನ್ನೆಲೆ ಪೋಲಿಸ್ ಇಲಾಖೆಯ ಮೇಲೆ ಸಾರ್ವಜನಿಕರಿಗೆ ನಂಬಿಕೆ ಇಲ್ಲದಂತಾಗಿದೆ.

Ad Widget

ಇದೀಗ ಬೆಳ್ಳಾರೆಯ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ ಐ ಅವರನ್ನು ವರ್ಗಾವಣೆ ಮಾಡಲಾಗಿದ್ದು ಅವರ ಸ್ಥಳಕ್ಕೆ ನೂತನ ಪಿಎಸ್ ಐ ಆಗಿ ಸುಹಾಸ್ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಬೆಳ್ಳಾರೆಯ ಸ್ಥಳಿಯ ಪ್ರದೇಶವಾದ ಸುಬ್ರಹ್ಮಣ್ಯ ಪೋಲಿಸ್ ಠಾಣೆಗೆ ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.

Leave a Comment

Your email address will not be published. Required fields are marked *