Ad Widget .

ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡ ‌ರಾಜಾಸ್ಥಾನ| 48 ಗಂಟೆ ಕಳೆದರೂ‌ ಪ್ರವೀಣ್ ಕೊಲೆಗಡುಕರ ಬಂಧಿಸದ್ದಕ್ಕೆ ಪ್ರಶ್ನೆ|

ಸಮಗ್ರ‌ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರೋ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್​ ನೆಟ್ಟಾರು ಹತ್ಯೆಯನ್ನು ನಾನು ಖಂಡಿಸುತ್ತೇನೆ ಎಂದು ರಾಜಸ್ಥಾನ ಸಿಎಂ ಅಶೋಕ್​​ ಗೆಹ್ಲೋಟ್​ ಟ್ವೀಟ್​ ಮಾಡಿದ್ದಾರೆ.

Ad Widget . Ad Widget .

“ಇತ್ತೀಚೆಗೆ ಉದಯಪುರದಲ್ಲಿ ಕನ್ಹಯ್ಯ ಲಾಲ್​ ಹತ್ಯೆ ಆದಾಗ ಕೇವಲ 4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದೆವು. ಈಗ ಕರ್ನಾಟಕದಲ್ಲಿ ಪ್ರವೀಣ್​ ಹತ್ಯೆಯಾಗಿ 48 ಗಂಟೆ ಆದ್ರೂ ಆರೋಪಿ ಬಂಧನವಾಗಿಲ್ಲ” ಎಂದು ಗೆಹ್ಲೋಟ್​ ಪ್ರಶ್ನಿಸಿದ್ದಾರೆ.

Ad Widget . Ad Widget .

ಇನ್ನು, ಕನ್ಹಯ್ಯ ಲಾಲ್​​ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಿದ್ದೇವೆ. ಕನ್ಹಯ್ಯ ಲಾಲ್​​ ಇಬ್ಬರು ಪುತ್ರರಿಗೂ ಸರ್ಕಾರಿ ಕೆಲಸ ನೀಡಿದ್ದೇವೆ. ನಾವು ಈ ಮೂಲಕ ಮೃತ ಕುಟುಂಬಸ್ಥರ ದುಃಖದಲ್ಲಿ ಭಾಗಿಯಾಗಿದ್ದೆವು. ಕರ್ನಾಟಕ ಸರ್ಕಾರ ಕೂಡಲೇ ಹಂತಕರನ್ನು ಬಂಧಿಸಿ, ಪ್ರವೀಣ್​ ನೆಟ್ಟಾರು ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಗೆಹ್ಲೋಟ್​ ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *