Ad Widget .

ತಿರುಪತಿ; ಕಾರು ಮತ್ತು ಲಾರಿ ಅಪಘಾತ, ಕರ್ನಾಟಕದ ಇಬ್ಬರು ಸಾವು

ತಿರುಪತಿ (ಆಂಧ್ರಪ್ರದೇಶ): ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕರ್ನಾಟಕದ ಇಬ್ಬರು ಮೃತಪಟ್ಟ ಘಟನೆಯೊಂದು ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆಯ ಚಿಲ್ಲಕೂರು ಮಂಡಲದ ವಾರಗಲಿ ಕ್ರಾಸ್ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Ad Widget . Ad Widget .

ಮೃತರನ್ನು ಬಸವರಾಜು ಮತ್ತು ಮಂಜು ಎಂದು ಗುರುತಿಸಲಾಗಿದ್ದು, ಕರ್ನಾಟಕದ ಯಾವ ಊರಿನವರು ಎಂದು ಇನ್ನಷ್ಟೇ ತಿಳಿಯಬೇಕಿದೆ.

Ad Widget . Ad Widget .

ಘಟನೆಯಲ್ಲಿ ಕಾರಿನಲ್ಲಿದ್ದ ಗಿರೀಶ್, ಶಿವರಾಮ ಕೃಷ್ಣ ಮತ್ತು ವೆಂಕಟೇಶ್ ಎಂಬವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವ. ಇವರು ಕಾರಿನಲ್ಲಿದ್ದವರು ನಾಯ್ಡು ಪೇಟೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ನೆಲ್ಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತಕ್ಕೀಡಾದ ಕಾರಿನ ಸಂಖ್ಯೆ ಕೆಎ 36 – ಬಿ 5707 ಎಂದು ಗೊತ್ತಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

Leave a Comment

Your email address will not be published. Required fields are marked *