ಸಮಗ್ರ ನ್ಯೂಸ್: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿರುವ ನಡುವೆಯೇ ತಾಲೂಕಿನಾದ್ಯಂತ ಮತ್ತೆ ಆಕ್ರೋಶ ಭುಗಿಲೆದ್ದಿದೆ.
ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವೆಡೆ ಟಯರ್ ಗೆ ಬೆಂಕಿ ಇಟ್ಟು ಆಕ್ರೋಶ ಹೊರಹಾಕಿದ್ದಾರೆ. ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರ ಗುತ್ತಿಗಾರುನಲ್ಲಿ ಶಂಕಿತ ಆರೋಪಿ ಶಪೀಕ್ ಕೆಲಸ ಮಾಡುತ್ತಿದ್ದ ಅಂಗಡಿಗೆ ದಾಳಿ ನಡೆಸಿದ ಕಾರ್ಯಕರ್ತರು ಅಂಗಡಿಗೆ ಹಾನಿ ನಡೆಸಿದ್ದಾರೆ.
ಸುಳ್ಯ ನಗರದಲ್ಲೂ ಆತಂಕ ಮನೆ ಮಾಡಿದ್ದು, ಕೆಲವೆಡೆ ಮುಸ್ಲಿಂ ಅಂಗಡಿಗಳು ಬಂದ್ ಆಗುತ್ತಿವೆ.