Ad Widget .

ರಾಜಾಸ್ಥಾನ: ವಾಯುಪಡೆಯ ಮಿಗ್21 ವಿಮಾನ ಪತನ; ಪೈಲಟ್ ಗಳು‌ ಸಾವು

ಸಮಗ್ರ ನ್ಯೂಸ್: ಭಾರತೀಯ ವಾಯುಪಡೆಯ (IAF) ಮಿಗ್ -21 ವಿಮಾನವು ಗುರುವಾರ ರಾತ್ರಿ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಪತನಗೊಂಡಿದ್ದು, ಇಬ್ಬರೂ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

Ad Widget . Ad Widget .

ಬಾರ್ಮರ್ʼನ ಭೀಮ್ಡಾ ಗ್ರಾಮದಲ್ಲಿ ಮಿಗ್ ಅಪಘಾತಕ್ಕೀಡಾಗಿದ್ದು, ಜೋರಾದ ಶಬ್ದದೊಂದಿಗೆ ಬೆಂಕಿಯ ದೊಡ್ಡ ಜ್ವಾಲೆಗಳನ್ನ ಜನರು ನೋಡಿದ್ದು ಮಿಗ್ ಅಪಘಾತದ ಸುದ್ದಿ ಕೋಲಾಹಲವನ್ನ ಸೃಷ್ಟಿಸಿದೆ. ಸಧ್ಯ ಸ್ಥಳಕ್ಕೆ ಅಧಿಕಾರಿಗಳು ತೆರಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Ad Widget . Ad Widget .

ಅಪಘಾತವು ಎಷ್ಟು ಗಂಭೀರವಾಗಿದೆಯೆಂದರೆ ಮಿಗ್ʼನ ಅವಶೇಷಗಳು ಅರ್ಧ ಕಿಲೋಮೀಟರ್ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇನ್ನು ಘಟನೆಗೆ ಸಂಬಂಧಿಸಿದ ಕೆಲವು ವೀಡಿಯೊಗಳು ಸಹ ಸಾಮಾಜಿಕ ಮಾಧ್ಯಮದಲ್ಲಿ ಹೊರಬರುತ್ತಿವೆ.

Leave a Comment

Your email address will not be published. Required fields are marked *