ಸುರತ್ಕಲ್ ನಲ್ಲಿ ಯುವಕನ ಕಗ್ಗೊಲೆ; ವೈಯಕ್ತಿಕ ದ್ವೇಷಕ್ಕೆ ಬಲಿಯಾದ ಫಾಝಿಲ್?

ಸಮಗ್ರ ನ್ಯೂಸ್: ಸುರತ್ಕಲ್ ಪೇಟೆಯಲ್ಲಿ ಮತ್ತೊಬ್ಬ ಯುವಕನ ಮೇಲೆ ತಲವಾರು ದಾಳಿ ನಡೆದಿದೆ. ಬಟ್ಟೆ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಯುವಕನನ್ನು ಭೀಕರವಾಗಿ ಕಡಿದು ಹಾಕಿದ್ದಾರೆ. ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾನೆ.

Ad Widget ... ..

ಕಾಟಿಪಳ್ಳ ಮಂಗಳಪೇಟೆ ನಿವಾಸಿ ಫಾಜಿಲ್ (26) ಮೃತ ಯುವಕ. ಎರಡು ಮುಸ್ಲಿಂ ತಂಡಗಳ ನಡುವೆ ವೈಯಕ್ತಿಕ ದ್ವೇಷದಿಂದ ಈ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಸಂಬಂಧಿಕರಿಂದಲೇ ಈ ಕೃತ್ಯ ಸಂಭವಿಸಿದೆ ಎಂದು ಹೇಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget

ಮೇಲ್ನೋಟಕ್ಕೆ ಸುನ್ನಿ ಮುಸ್ಲಿಂ ಹುಡುಗಿಯನ್ನು ಷಿಯಾ ಮುಸ್ಲಿಂ ಹುಡುಗ ಲವ್ ಮಾಡಿರುವ ಬಗ್ಗೆ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ತನಿಖೆಯಿಂದ‌ ಸತ್ಯ‌ ತಿಳಿದುಬರಬೇಕಿದೆ.

ಮಂಗಳೂರು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದು, ಕೊಲೆಗೆ ನಿಖರ ಕಾರಣ ತಿಳಿದಿಲ್ಲ, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

Leave a Comment

Your email address will not be published. Required fields are marked *