Ad Widget .

ಬೈಕ್ ಅಪಘಾತ; ಕಾಲೇಜು ಉಪನ್ಯಾಸಕ ಸಾವು

ಅಂಕೋಲಾ: ಸವಾರನ ನಿಯಂತ್ರಣ ತಪ್ಪಿ ಬೈಕ್‌ ಉರುಳಿದ ಬಿದ್ದ ಪರಿಣಾಮ ಕಾಲೇಜ್ ಉಪನ್ಯಾಸಕ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ತಾಲೂಕಿನ ರಾ.ಹೆ.66ರ ಬೆಳೆಸೆಯಲ್ಲಿ ಗುರುವಾರ ನಡೆದಿದೆ.

Ad Widget . Ad Widget .

ತಾಲೂಕಿನ ವಾಸರೆಕುದ್ರಿಗೆಯ ನಿವಾಸಿ ಅರವಿಂದ್ ಬೀರಾ ಆಗೇರ (49) ಮೃತಪಟ್ಟ ದುರ್ದೈವಿ.

Ad Widget . Ad Widget .


ಅರವಿಂದ್ ಅಂಕೋಲಾ ಪಟ್ಟಣದ ಪಿ.ಎಂ.ಪದವಿ ಪೂರ್ವ ಕಾಲೇಜಿನಲ್ಲಿ ಸಮಾಜ ವಿಷಯದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮುಂಜಾನೆ ವಾಸರೆ ಕುದ್ರಿಗೆಯಿಂದ ಕಾಲೇಜಿಗೆ ಬರುತ್ತಿರುವ ವೇಳೆ ಬೈಕ್ ಸ್ಕಿಡ್ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು.

ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಅಂಕೋಲಾ ದಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *