ಸುಳ್ಯ: ಪ್ರವೀಣ್ ಹತ್ಯೆಗೆ ಮುಂಜಾನೆಯಿಂದಲೇ ನಡೆಯುತ್ತಿತ್ತಾ ಪ್ರಿಪರೇಶನ್?| ಬೈಕ್ ನಲ್ಲಿ ಸುತ್ತಾಡಿದ್ದರಾ ದುಷ್ಕರ್ಮಿಗಳು?

ಸಮಗ್ರ ನ್ಯೂಸ್: ಮಂಗಳವಾರ ತಡರಾತ್ರಿ ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಸಂಬಂಧಿಸಿದಂತೆ ಒಂದೊಂದೇ ಮಾಹಿತಿಗಳು ಬಯಲಾಗುತ್ತಿವೆ. ಪ್ರವೀಣ್ ಹತ್ಯಗೆ ದುಷ್ಕರ್ಮಿಗಳು ಮೊದಲೇ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾದ ಮಾಹಿತಿ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

Ad Widget ... ..

ನಿನ್ನೆ ರಾತ್ರಿ 9 ಗಂಟೆಗೆ ಪ್ರವೀಣ್ ತನ್ನ ಕೋಳಿ ಅಂಗಡಿ ಬಾಗಿಲು ಹಾಕುವುದನ್ನೇ ಹೊಂಚು ಹಾಕಿ‌ ಕಾದು‌ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಪ್ರವೀಣ್ ಮೇಲೆ ದಾಳಿ ಮಾಡಿದ್ದಾರೆ‌. ದುಷ್ಕರ್ಮಿಗಳು KL1678 ಸಂಖ್ಯೆಯ splendor ಬೈಕ್‌ ನಲ್ಲಿ‌ ಬಂದಿದ್ದರು ಎನ್ನಲಾಗಿದೆ. ಅದೇ ಬೈಕ್ ನಲ್ಲಿ‌ ನಿನ್ನೆ ಹಗಲು ಹೊತ್ತು ಬೆಳ್ಳಾರೆಯಲ್ಲಿ ಸುತ್ತಾಡಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ‌.

Ad Widget

ಇನ್ನು ಬೈಕ್ ನಲ್ಲೇ ಬಂದು ಕೊಂದು ಬೈಕ್ ನಲ್ಲೇ ಎಸ್ಕೇಪ್ ಆಗಿ , ಬಳಿಕ ಬೈಕ್ ಅಡಗಿಸಿಟ್ಟು ಕಾರಿನಲ್ಲಿ ಹಂತಕರು‌ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

Leave a Comment

Your email address will not be published. Required fields are marked *