Ad Widget .

ಕೋರ್ಟ್ ನಲ್ಲೇ ಉಸಿರುಚೆಲ್ಲಿದ ಕಬಡ್ಡಿ‌ ಆಟಗಾರ| ಆಡುತ್ತಿದ್ದಾಗಲೇ ಸಂಭವಿಸಿತು ಹೃದಯಾಘಾತ

ಸಮಗ್ರ ನ್ಯೂಸ್: ಕಬಡ್ಡಿ ಆಡುತ್ತಿರುವ ವೇಳೆ ಹಠಾತ್ ಹೃದಯಾಘಾತ ಸಂಭವಿಸಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕುಡ್ಡಲೂರು ಜಿಲ್ಲೆಯ ಮಂಡಕ್ಕಿ ಗ್ರಾಮದಲ್ಲಿ ನಡೆದಿದೆ.‌ 22 ವರ್ಷದ ವಿದ್ಯಾರ್ಥಿ ವಿಮಲ್​ರಾಜ್ ಮೃತ ದುರ್ದೈವಿ. ಈತ ಎರಡನೇ ವರ್ಷದ BSc Zoology ಓದುತ್ತಿದ್ದ.

Ad Widget . Ad Widget .

ಸೇಲಂ ಜಿಲ್ಲೆಯಲ್ಲಿರುವ ಖಾಸಗಿ ಖಾಲೇಜಿನಲ್ಲಿ ಓದುತ್ತಿದ್ದ ವಿಮಲ್ ರಾಜ್, ವೀಕೆಂಡ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದ. ಜಿಲ್ಲಾ ಮಟ್ಟದ ‘ಮುರಟ್ಟು ಕಾಲೈ ಟೀಂ’ ಕಬಡ್ಡಿ ತಂಡವನ್ನ ವಿದ್ಯಾರ್ಥಿ ಪ್ರತಿನಿಧಿಸುತ್ತಿದ್ದ ಎನ್ನಲಾಗಿದೆ.

Ad Widget . Ad Widget .

ಪಂದ್ಯದ ವೇಳೆ ಎದುರಾಳಿ ತಂಡದ ಆಟಗಾರರ ಮೇಲೆ ರೈಡಿಂಗ್ ಹೋದಾಗ ಏಕಾಏಕಿ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನ ಪಣರುಟಿ ಜನರಲ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಗಿತ್ತು. ಆದರೆ ವೈದ್ಯರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ನಂತರ ವಿಲ್ಲುಪುರಂ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆಯನ್ನ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *