Ad Widget .

ಅಪ್ರಾಪ್ತ ಬಾಲಕ ನಾಪತ್ತೆ; ಜೊತೆಗೆ ಎದುರು ಮನೆ ಆಂಟಿ ಕೂಡಾ ಕಾಣೆ

ಸಮಗ್ರ ನ್ಯೂಸ್: ಆ ಊರಿನಲ್ಲೊಂದು ಕಾಲೋನಿ ಇದೆ. ಆ ಕಾಲೋನಿಯಿಂದ ಇತ್ತೀಚೆಗೆ 15 ವರ್ಷದ ಬಾಲಕ ನಾಪತ್ತೆಯಾಗಿದ್ದ. ಇದರಿಂದ ಪೋಷಕರು ಸುತ್ತಮುತ್ತ ಹುಡುಕಾಡುವಂತಾಯಿತು. ಸ್ನೇಹಿತರ ಮನೆಯಲ್ಲಿ ಇದ್ದಾರಾ ಎಂದೂ ವಿಚಾರಿಸಿದರು. ಆದರೆ ಎಲ್ಲೂ ಪತ್ತೆಯಾಗಲಿಲ್ಲ. ಆದರೆ ಕುತೂಹಲಕಾರಿ ಬೆಳವಣಿಗೆಯಲ್ಲಿ ಬಾಲಕನ ಮನೆಯ ಎದುರು ವಾಸವಿದ್ದ 29 ವರ್ಷದ ವಿವಾಹಿತ ಯುವ ಮಹಿಳೆ ಕೂಡ ನಾಪತ್ತೆಯಾಗಿದ್ದಾರೆ ಎಂಬ ಸಂಗತಿ ಬಹಿರಂಗವಾಯಿತು. ಇದರಿಂದ ಬಾಲಕನ ಪೋಷಕರಲ್ಲಿ ಟೆನ್ಷನ್ ಶುರುವಾಗಿದೆ. ಆಕೆ ತಮ್ಮ ಹುಡುಗನನ್ನು ಕಿಡ್ನಾಪ್ ಮಾಡಿದ್ದಾಳೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ad Widget . Ad Widget .

ಈ ಘಟನೆ ನಡೆದಿರುವುದು ಆಂದ್ರಪ್ರದೇಶದ ಗುಡಿವಾಡ ಪಟ್ಟಣದ ಗುಡಿಮನ್ ಪೇಟ ಎಂಬ ಕಾಲೋನಿಯಲ್ಲಿ. ಇದೀಗ ಕಾಣೆಯಾದ ಬಾಲಕನ ಕುರಿತು
ಕುಟುಂಬಸ್ಥರು ದೂರು ನೀಡಿದ ಮೇರೆಗೆ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಣಕ್ಕಾಗಿ ಬಾಲಕನನ್ನು ಅಪಹರಿಸಲಾಗಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಡ ಮತ್ತು ಇಬ್ಬರು ಮಕ್ಕಳಿರುವ ವಿವಾಹಿತ ಮಹಿಳೆಯೊಬ್ಬರು ಹುಡುಗನನ್ನು ದೂರ ಮಾಡಿದ್ದರಿಂದ ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸ ಒದಗಿಸಿದೆ.

Ad Widget . Ad Widget .

ಮದುವೆಗೆಂದು ಬಾಲಕನನ್ನು ಕರೆದುಕೊಂಡು ಹೋಗಲಾಗಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿದ್ದು, ಬಾಲಕನ ಮಾಹಿತಿ ತಿಳಿಸುವವರಿಗೆ ಬಹುಮಾನ ಕೂಡಾ ಘೋಷಿಸಲಾಗಿದೆ.

Leave a Comment

Your email address will not be published. Required fields are marked *