ಗುಂಡ್ಯ: ಬಾಲಕನ ಪ್ರಾಣ ಕಸಿದ ವಿದ್ಯುತ್: ಕರೆಂಟ್ ಶಾಕ್ ಗೆ ದಾರುಣವಾಗಿ ಬಲಿಯಾದ ವಿದ್ಯಾರ್ಥಿ

ಸಮಗ್ರ ನ್ಯೂಸ್ : ವಿದ್ಯುತ್‌ ಶಾಕ್‌ ಹೊಡೆದು 9 ನೇ ತರಗತಿಯ ಬಾಲಕ ಮೃತಪಟ್ಟ ದಾರುಣ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ಗುಂಡ್ಯ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಜು 26 ರಂದು ಸಂಜೆ ನಡೆದಿದೆ.

Ad Widget ... ..

ಗುಂಡ್ಯ ಗ್ರಾಮದ ಅಡ್ಡಹೊಳೆ ನಿವಾಸಿ ಮೊನೆಚ್ಚನ್‌ ಹಾಗೂ ವೀಣಾ ದಂಪತಿಗಳ ಪುತ್ರ ರೂಪೇಶ್‌ (15) ಮೃತ ಪಟ್ಟ ಬಾಲಕ . ಈತ ಸ್ಥಳೀಯ ಉದನೆ ಶಾಲೆಯಲ್ಲಿ 9 ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು ಪ್ರಸ್ತುತ ಶಾಲೆಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.

Ad Widget

ಇಂದು ಮಧ್ಯಾಹ್ನ ಎಕ್ಸ್‌ಟೆನ್ಷನ್‌ ಬಾಕ್ಸ್‌ ಗೆ ಮೊಬೈಲ್‌ ಚಾರ್ಜರ್‌ ಸಿಕ್ಕಿಸಿ ಅದರಲ್ಲಿ ಮೊಬೈಲ್‌ ಫೋನನ್ನು ಚಾರ್ಜ್ ಗೆ ಹಾಕಿ ಬಾಲಕ ಆಡಲೆಂದು ಹೊರ ಹೋಗಿದ್ದ . ಆಟವಾಡಿ ವಾಪಸ್ಸು ಮನೆಗೆ ಬಂದು ಎಕ್ಸ್‌ಟೆನ್ಷನ್‌ ಬಾಕ್ಸ್‌ ನಿಂದ ಚಾರ್ಜರ್‌ ತೆಗೆಯುವ ವೇಳೆ ವಿದ್ಯುತ್‌ ಶಾಕ್‌ ಹೊಡೆದು ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ವೇಳೆ ಬಾಲಕನ ಚಿಕ್ಕಮ್ಮ ಹಾಗೂ ಸಹೋದರ ಮಾತ್ರ ಮನೆಯಲ್ಲಿದ್ದರು ಎಂದು ತಿಳಿದು ಬಂದಿದೆ .

ಎರಡು ತಿಂಗಳ ಹಿಂದೆಯಷ್ಟೆ ಮೃತ ಬಾಲಕನ ಮನೆಗೆ ಬೆಳಕು ಯೋಜನೆಯ ಮೂಲಕ ವಿದ್ಯುತ್‌ ಸಂಪರ್ಕ ನೀಡಲಾಗಿತ್ತು . ಇದೀಗ ಈ ಬೆಳಕು ಯೋಜನೆಯೇ ಮನೆಯ ಬೆಳಕನ್ನು ನಂದಿಸಿದೆ.

Leave a Comment

Your email address will not be published. Required fields are marked *