Ad Widget .

ವಿಶ್ವದಾಖಲೆ ಬರೆದ ಟೀಂ ಇಂಡಿಯಾ| ವೆಸ್ಟ್ ಇಂಡೀಸ್ ವಿರುದ್ದ 12 ಸರಣಿಯಲ್ಲಿ ಜಯಮಾಲೆ

ಸಮಗ್ರ ನ್ಯೂಸ್: ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಭಾರತ ತಂಡ 2-0 ರನ್‌ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ತಂಡವೊಂದರ ವಿರುದ್ಧ ಸತತ 12 ಸರಣಿ ಜಯಿಸಿದ ವಿಶ್ವದಾಖಲೆ ಬರೆದಿದೆ.

Ad Widget . Ad Widget .

ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌, ಶಾಯ್‌ ಹೋಪ್‌ ಗಳಿಸಿದ ಶತಕದ ನೆರವಿನಿಂದ 311 ರನ್‌ ಗಳಿಸಿತ್ತು.

Ad Widget . Ad Widget .

ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ಪರ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್ (63), ಸಂಜು ಸಾಮ್ಸನ್ (54) ಹಾಗೂ ಅಕ್ಷರ್ ಪಟೇಲ್ (ಅಜೇಯ 64) ಅರ್ಧಶತಕ ಸಿಡಿಸಿ ಇನ್ನೂ 2 ವಿಕೆಟ್‌ ಬಾಕಿ ಇರುವಂತೆಯೇ ಗೆಲುವು ತಂದುಕೊಟ್ಟರು.

ಟೀಂ ಇಂಡಿಯಾ ವಿಶ್ವದಾಖಲೆ
2007ರಿಂದ ಇಲ್ಲಿಯವರೆಗೆ ವೆಸ್ಟ್‌ ಇಂಡೀಸ್‌ ವಿರುದ್ಧ 12 ಬಾರಿ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿರುವ ಭಾರತ, ಎಲ್ಲ ಸಲವೂ ಮೇಲುಗೈ ಸಾಧಿಸಿದೆ. ಈ ಮೊದಲು ಯಾವುದೇ ತಂಡ ಮತ್ತೊಂದು ತಂಡದ ವಿರುದ್ಧ ಇಷ್ಟು ಸರಣಿಗಳನ್ನು ಸತತವಾಗಿ ಜಯಿಸಿಲ್ಲ. ಪಾಕಿಸ್ತಾನ, ಜಿಂಬಾಬ್ವೆ ವಿರುದ್ಧ 1996ರಿಂದ 2021ರ ನಡುವೆ 11 ಸರಣಿಗಳನ್ನು ಗೆದ್ದಿದ್ದು ನಂತರದ ಸ್ಥಾನದಲ್ಲಿದೆ.

1999ರಿಂದ 2022ರ ವರೆಗೆ ವೆಸ್ಟ್‌ ಇಂಡೀಸ್‌ ವಿರುದ್ಧ ಆಡಿರುವ 10 ಸರಣಿಗಳಲ್ಲಿ ಗೆಲುವು ಸಾಧಿಸಿರುವ ಪಾಕ್‌ ಪಡೆಗೆ ದಾಖಲೆ ಮುಂದುವರಿಸುವ ಅವಕಾಶವೂ ಇದೆ.

ಉಳಿದಂತೆ, ದಕ್ಷಿಣ ಆಫ್ರಿಕಾ ತಂಡ (1995-2018) ಜಿಂಬಾಬ್ವೆ ವಿರುದ್ಧ ಹಾಗೂ ಭಾರತ ತಂಡ (2007-2021) ಶ್ರೀಲಂಕಾ ವಿರುದ್ಧ ತಲಾ 9 ಸರಣಿಗಳನ್ನು ಜಯಿಸಿರುವುದೂ ಉತ್ತಮ ದಾಖಲೆಗಳಾಗಿವೆ.

Leave a Comment

Your email address will not be published. Required fields are marked *