Ad Widget .

ಸುಳ್ಯ: ಅರಮನೆಗಯಕ್ಕೆ ಅಂಬೇಡ್ಕರ್ ರಕ್ಷಣಾ ವೇದಿಕೆ ಭೇಟಿ| ಊರವರಿಂದ ಮನವಿ ಸಂಗ್ರಹ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಮರ್ಕಂಜ ಮತ್ತು ಅರಂತೋಡು ಗ್ರಾಮಕ್ಕೆ ಸಂಬಂಧಪಟ್ಟ ಅರಮನೆಗಯ ಎಂಬಲ್ಲಿ ಮುರಿದು ಹೋಗಿರುವ ತೂಗು ಸೇತುವೆ ಸ್ಥಳಕ್ಕೆ ಅಂಬೇಡ್ಕರ್ ರಕ್ಷಣಾ ವೇದಿಕೆ ಭೇಟಿ ನೀಡಿದ್ದು,‌ ಪರಿಶೀಲನೆ ನಡೆಸಿದೆ.

Ad Widget . Ad Widget .

ಈ ವೇಳೆ ಸುಮಾರು 30 ವರ್ಷಗಳಿಂದ ಶಾಸಕರಿಗೆ ಮತ್ತು ಜಿಲ್ಲಾಧಿಕಾರಿಯವರಿಗೆ ಸೇತುವೆ ನಿರ್ಮಾಣ ಮಾಡಿ ಕೊಡಿ ಎಂದು ಎಷ್ಟು ಹೇಳಿದರೂ ಮಾಡಿಕೊಟ್ಟಿಲ್ಲ ಆದಕಾರಣ ಅಂಬೇಡ್ಕರ್ ರಕ್ಷಣಾ ವೇದಿಕೆಗೆ ನಿಮ್ಮ ಹೋರಾಟದ ಮುಖಾಂತರ ಸೇತುವೆ ನಿರ್ಮಿಸಿ ಕೊಡಬೇಕೆಂದು ಸಂಘಟನೆಗೆ ಊರವರು ತಿಳಿಸಿದ್ದರು.

Ad Widget . Ad Widget .

ಜು.23 ರಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ಮತ್ತು ಜಿಲ್ಲಾ ಸಂಚಾಲಕರದ ಪರಮೇಶ್ವರ ಕೆಮ್ಮಿಂಜೆ ಸ್ಥಳಕ್ಕೆ ಭೇಟಿ ಕೊಟ್ಟಾಗ ಅಲ್ಲಿಯ ದಲಿತ ನಿವಾಸಿಗಳು ನಮ್ಮ ಸಂಘಟನೆಗೆ ಮನವಿ ಪತ್ರ ಕೊಟ್ಟು ಮನವಿ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಒಂದು ಮೀಸಲಾತಿ ಕ್ಷೇತ್ರ ಒಬ್ಬ ದಲಿತ ಶಾಸಕ ಎಸ್ ಅಂಗಾರವರು 30 ವರ್ಷಗಳಿಂದ ನಿರಂತರ ಗೆದ್ದು ಈಗ ಸಚಿವರಾಗಿದ್ದಾರೆ, ಇವರಿಂದ 30 ವರ್ಷಗಳಿಂದ ಸೇತುವೆ ಮಾಡಿಕೊಡಿ ಎಂದು ಆ ಗ್ರಾಮದ ದಲಿತ ನಿವಾಸಿಗಳು ಹೇಳಿದಾಗ ಮತ ಕೇಳಲು ಬರುವಾಗ ಓಟು ಕಳೆದ ನಂತರ ಮಾಡಿಕೊಡುತ್ತೇವೆ ಎಂದು ಸುಳ್ಳು ಭರವಸೆಯನ್ನು ನೀಡುತ್ತಾರೆ.

ಹೀಗೆ 30 ವರ್ಷಗಳಿಂದ ದಲಿತ ಜನಾಂಗದವರನ್ನು ಮಂಗ ಮಾಡಿ ಓಟು ದಿಟ್ಟಿಸಿಕೊಳ್ಳುತ್ತಾರೆ. ಓಟು ಕಳೆದು ಶಾಸಕರಿಗೆ ಫೋನ್ ಮಾಡಿದಾಗ ನಿಮ್ಮ ಓಟು ನನಗೆ ಬೇಕಾಗಿಲ್ಲ ಎಂದು ಶಾಸಕರು ಹೇಳುತ್ತಾರೆ. ಜನರು ಓಟು ಕೊಟ್ಟು ಗೆದ್ದ ಮೇಲೆ ನಿಮ್ಮ ಓಟು ಬೇಕಾಗಿಲ್ಲ ಸಚಿವ ಸ್ಥಾನದಲ್ಲಿ ಕೂತ್ಕೊಂಡು ಈ ರೀತಿ ಮಾತನಾಡುವುದು ಸರಿಯಲ್ಲ ಜನರು ನಿಮ್ಮನ್ನು ಓಟು ಹಾಕಿ ಗೆಲ್ಲಿಸಿದು ಜನರ ಸೇವೆ ಮಾಡಲು ಈ ರೀತಿಯ ಉಡಾಫೆಯ ಮಾತನಾಡಲು ಅಲ್ಲ.

ಈ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬನಿಗೂ ನ್ಯಾಯ ಕೇಳುವ ಹಕ್ಕು ಇದೆ ಇವತ್ತು ಯಾವುದೇ ಒಬ್ಬ ಶಾಸಕರ ಮಕ್ಕಳಾಗಲಿ ಒಬ್ಬ ಮಂತ್ರಿಯ ಮಕ್ಕಳಾಗಲಿ ದೊಡ್ಡ ಅಧಿಕಾರಿಯ ಮಕ್ಕಳಾಗಲಿ ಶ್ರೀಮಂತರ ಮಕ್ಕಳಾಗಲಿ ಆ ಮುರಿದು ಹೋದ ತೂಗು ಸೇತುವೆಯಲ್ಲಿ ಓಡಾಡುತ್ತಿಲ್ಲ ದಲಿತ ಜನಾಂಗದ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ಹೋಗುತ್ತಾರೆ ಮತ್ತು ವಯಸ್ಸಾದ ವೃದ್ದರು ಆ ಮುರಿದು ಹೋದ ತೂಗು ಸೇತುವೆಯಲ್ಲಿ ದಾಟುತ್ತಾರೆ. ನಿಮ್ಮ ತಂದೆ ತಾಯಿಯಾಗಿದ್ದರೆ ನೀವು ಇದೇ ರೀತಿ ಮಾಡುತ್ತಿದ್ದೀರಾ ದಲಿತ ಜನಾಂಗದವರು ನೀರಿಗೆ ಬಿದ್ದು ಸತ್ರು ಪರವಾಗಿಲ್ಲ ನಿಮಗೆ ಓಟು ಸಿಕ್ಕಿದ್ದರೆ ಸಾಕು ಆದರೆ ಇವತ್ತು ಒಬ್ಬ ಮಂತ್ರಿಯ ಮಗ ಇಲ್ಲದಿದ್ದರೆ ದೊಡ್ಡ ಅಧಿಕಾರಿಯ ಮಗ ಇಲ್ಲದಿದ್ದರೆ ಶ್ರೀಮಂತರ ಮಗ ಇದ್ದಿದ್ರೆ ಈ ಮೊದಲೇ ಸೇತುವೆ ಆಗುತ್ತಿತ್ತು ಅಲ್ಲವೇ?

ಇರುವುದು ದಲಿತರ ಮಕ್ಕಳು ಆದಕಾರಣ ಸೇತುವೆ ನಿರ್ಮಾಣ ಆಗಿಲ್ಲ ಮೊನ್ನೆ ಜಿಲ್ಲಾಧಿಕಾರಿಯವರು ಗ್ರಾಮ ವಾಸ್ತವಕ್ಕೆ ಬಂದರು ತೂಗು ಸೇತುವೆ ಹತ್ತಿರ ಬರಲಿಲ್ಲ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ ಮತ್ತೆ ಯಾಕೆ ಗ್ರಾಮ ವಾಸ್ತವ್ಯ ಮಾಡುತ್ತೀರಿ?

ಜಿಲ್ಲಾಧಿಕಾರಿಯವರೇ ಈ ರೀತಿ ಮಾಡಿದರೆ ದಲಿತ ಜನಾಂಗದವರು ಅವರ ಕಷ್ಟಗಳನ್ನು ಯಾರೊಂದಿಗೆ ಹೇಳಬೇಕು ಎರಡು ವರ್ಷದ ಹಿಂದೆ ಸುಳ್ಯ ತಹಸೀಲ್ದಾರರಾದ ಅನಿತಾಲಕ್ಷ್ಮಿಯವರು ಅರಮನೆ ಗಯ ಸ್ಥಳಕ್ಕೆ ಭೇಟಿ ನೀಡಿ ನಿಮಗೆ ಆದಷ್ಟು ಬೇಗ ಸೇತುವೆ ಮಾಡಿಸಿಕೊಡುತ್ತೇನೆ ಎಂದು ಹೇಳಿ ಹೋದವರು ಎರಡು ವರ್ಷವಾದರೂ ಪತ್ತೆ ಇಲ್ಲ ವೇದಿಕೆಯಲ್ಲಿ ಮಾತ್ರ ಪರಿಶಿಷ್ಟ ಜಾತಿ ಪಂಗಡದವರಿಗೆ ತೊಂದರೆಯಾದಾಗ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ ಮತ್ತು ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆಗೆ ಜಿಲ್ಲಾಧಿಕಾರಿಯವರು ಮಂಗಳೂರಿಗೆ ಕರೆಯುತ್ತಾರೆ ಅಲ್ಲಿಗೆ ಹೋಗಿ ಬಿಸ್ಕೆಟ್ ಮತ್ತೆ ಚಾಯ ಕುಡಿದು ಬರುವುದು ಬಿಟ್ಟರೆ ಬೇರೆ ದಲಿತರ ಯಾವ ಕೆಲಸ ಕೂಡ ಆಗುವುದಿಲ್ಲ ಇವತ್ತು ಜನರ ತೆರಿಗೆ ಹಣದಿಂದ ಶಾಸಕರಿಗೆ ಮಂತ್ರಿಗಳಿಗೆ ತಿಂಗಳ ಸಂಬಳ ಬರುತ್ತದೆ ಅನುದಾನ ಯಾರ ಜೇಬಿನಿಂದ ಕೊಡುವುದಲ್ಲ ಈಗ ಅರಮನೆಗಯ ಎಂಬಲ್ಲಿ 30 ದಲಿತ ಮನೆಗಲಿದೆ ಆದಕಾರಣ ಅರಮನೆಗಯ ಎಂಬ ಜಾಗದಲ್ಲಿ ತಕ್ಷಣ ಸೇತುವೆ ನಿರ್ಮಿಸಿ ಕೊಡಬೇಕು ಮತ್ತು ಅಧಿಕಾರಿಗಳು ಮತ್ತು ಸಚಿವರು ಸ್ಥಳಕ್ಕೆ ಭೇಟಿ ನೀಡಿ ದಲಿತ ಜನಾಂಗದವರಿಗೆ ಸ್ಪಂದಿಸಬೇಕು ಮತ್ತುಆದಷ್ಟು ಬೇಗ ಅಲ್ಲಿ ಸೇತುವೆರಿ ನಿರ್ಮಿಸಿ ಕೊಡಬೇಕು.

ಒಂದುವೇಳೆ ಈ ಎಲ್ಲ ಬೇಡಿಕೆ ಈಡೇರದಿದ್ದಲ್ಲಿ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆ ವತಿಯಿಂದ ಉಗ್ರ ಪ್ರತಿಭಟನೆ ನ್ಯಾಯ ಸಿಗುವವರೆಗೆ ಧರಣಿ ಮಾಡಲಿದ್ದೇವೆ ಎಂದು ಮಾಧ್ಯಮದ ಮೂಲಕ ಎಚ್ಚರಿಕೆಯನ್ನು ಕೊಡುತ್ತಿದ್ದೇನೆ ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆ.

Leave a Comment

Your email address will not be published. Required fields are marked *