ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಎಸ್ಎಸ್ಎಲ್ಸಿ ಬೋರ್ಡ್| ಕಠಿಣವಾಗಲಿದೆ ಎಸ್ಎಸ್ಎಲ್ ಸಿ ಪರೀಕ್ಷೆ

ಸಮಗ್ರ‌ ನ್ಯೂಸ್: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, ಕೊರೋನಾ ವೇಳೆ ಇದ್ದ ಸರಳತೆಯ ಪ್ರಮಾಣ ಕೈಬಿಟ್ಟು, ಕಠಿಣ ಪ್ರಮಾಣದ ಪ್ರಶ್ನೆಗಳನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕಠಿಣವಾಗಿರಲಿದೆ.

Ad Widget ... ..

ಈ ಸಂಬಂಧ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಮಾಹಿತಿ ಬಿಡುಗಡೆ ಮಾಡಿದೆ. ಅದರಂತೆ ಈ ಬಾರಿ ಸುಲಭ ಪ್ರಶ್ನೆ ಶೇ.30, ಸಾಧಾರಣ ಪ್ರಶ್ನೆ ಶೇ.50, ಕಠಿಣ ಪ್ರಶ್ನೆ ಶೇ.20 ಸೇರಿದಂತೆ ಒಟ್ಟು 100 ಅಂಕಗಳಿಗೆ ಸರಿಸಮವಾಗಿ ಪ್ರಶ್ನೆ ಪತ್ರಿಕೆ ರೂಪಿಸಿದೆ.

Ad Widget

ಕಳೆದ ಎರಡು ವರ್ಷ ಕೊರೋನಾ ಕಾರಣಕ್ಕೆ ಸರಳವಾದ ಪ್ರಶ್ನೆ ಪತ್ರಿಕೆ ಜತೆಗೆ ಬಹುಆಯ್ಕೆ ಮಾದರಿಯ ಪ್ರಶ್ನೆಗಳನ್ನು ನೀಡಿತ್ತು. ಆದ್ರೇ ಮುಂದಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ರೀತಿ ಪ್ರಶ್ನೆ ಪತ್ರಿಕೆ ಸುಲಭವಾಗಿರುವುದಿಲ್ಲ. ಅಲ್ಲದೇ ಕಳೆದ 2 ವರ್ಷ ಶೇ.75 ಹಾಜರಾತಿಗೆ ನೀಡಿದ್ದ ವಿನಾಯತಿಯನ್ನು ಮುಂದಿನ ಪರೀಕ್ಷೆಗೆ ರದ್ದು ಮಾಡಿದೆ.

Leave a Comment

Your email address will not be published. Required fields are marked *