ಸಮಗ್ರ ನ್ಯೂಸ್: ಜಗತ್ತಿನಲ್ಲಿ ಮಂಕಿಪಾಕ್ಸ್ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಿದ್ದು ವಿಶ್ವ ಆರೋಗ್ಯ ಸಂಸ್ಥೆ ಜಾಗತಿಗ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಕೊರೊನಾ ತಣ್ಣಗಾಗುವ ಹೊತ್ತಿನಲ್ಲಿ ಮತ್ತೊಂದು ಮಹಾಮಾರಿ ವಕ್ಕರಿಸಿದ್ದು, ಜಗತ್ತು ಬೆಚ್ಚಿಬಿದ್ದಿದೆ.
ಜುಲೈ 20ರಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಮಂಕಿಪಾಕ್ಸ್ 72 ದೇಶಗಳ 15,800 ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ.
ಪಶ್ಚಿಮ ಮತ್ತು ಮಧ್ಯ ಆಫ್ರಿಕನ್ ದೇಶಗಳ ಹೊರಗೆ ಮೇ ತಿಂಗಳ ಆರಂಭದಿಂದ ಮಂಕಿಪಾಕ್ಸ್ ಸೋಂಕುಗಳಲ್ಲಿ ಏರಿಕೆ ಕಂಡುಬಂದಿದೆ.