ವಿಟ್ಲ: ಬೆಳ್ಳಂಬೆಳಗ್ಗೆ ಆಲ್ಟೋ ಕಾರ್ ನಲ್ಲಿ ಹಿಂಸಾತ್ಮಕವಾಗಿ ಅಕ್ರಮ ಗೋಸಾಗಾಟ| ಆರೋಪಿಗಳನ್ನು ಪೊಲೀಸರಿಗೊಪ್ಪಿಸಿದ ಸಂಘಟನೆ ಕಾರ್ಯಕರ್ತರು

ಸಮಗ್ರ ನ್ಯೂಸ್: ಅಕ್ರಮ ಗೋ ಸಾಗಾಟ ಮಾಡುತ್ತಿದ್ದವರನ್ನು ಹಿಂದೂ ಪರ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ‌ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದ ಪದವು ಕೋಡಂದೂರು ರಸ್ತೆಯಲ್ಲಿ ನಡೆದಿದೆ.

Ad Widget ... ..

ಬೆಳ್ಳಂಬೆಳಗ್ಗೆಯೆ ಅಕ್ರಮದಲ್ಲಿ ತೊಡಗಿದ್ದವರು ಆಲ್ಟೋ ಕಾರಿನಲ್ಲಿ ಹಿಂಸಾತ್ಮಕವಾಗಿ ಎರಡು ಗೋವುಗಳನ್ನು ಕೂಡಿ ಹಾಕಿ ಸಾಗಾಟ ಮಾಡುತ್ತಿದ್ದರು. ಇದನ್ನರಿತ ಹಿಂದೂ ಪರ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು‌ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

Ad Widget

ವಾಹನ ಹಾಗೂ ವಾಹನದ ಮಾಲಕರನ್ನು ತಕ್ಷಣ ಬಂಧಿಸಿ ಸುರತ್ಕಲ್ ಗಂಜೀಮಠ ಮಾದರಿಯಲ್ಲಿ ಆರೋಪಿಗಳ ಆಸ್ತಿ ಜಪ್ತಿ ಮಾಡಬೇಕೆಂದು ಹಿಂದೂ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *