Ad Widget .

ಮಂಗಳೂರು: ಆತ್ಮಹತ್ಯೆಗೈದ ಸ್ಥಿತಿಯಲ್ಲಿ ತಲಕಳ ಧರ್ಮದರ್ಶಿ ಪತ್ತೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಸಮೀಪದ ತಲಕಳದ ಶ್ರೀಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿಯ ಮೃತದೇಹ ಅವರು ವಾಸವಿದ್ದ ಧರ್ಮ ಚಾವಡಿಯ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

Ad Widget . Ad Widget .

ಎಕ್ಕರೆಗಟ್ಟಲೆ ಪ್ರದೇಶದಲ್ಲಿ ಧರ್ಮ ಚಾವಡಿ ಸಂಸ್ಥೆಯನ್ನು ಕಟ್ಟಿದ್ದು ಇಲ್ಲಿಯೇ ಇವರು ವಾಸವಾಗಿದ್ದರು.
ಸ್ವಾಮೀಜಿಯವರ ಪೂರ್ವಾಶ್ರಮದ ಪತ್ನಿ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

Ad Widget . Ad Widget .

ಸ್ವಾಮೀಜಿ ಕಟ್ಟಿ ಬೆಳೆಸಿರುವ ಧರ್ಮ‌ಚಾವಡಿ ಪೂರ್ವಾಶ್ರಮದಲ್ಲಿ ದೇವಿಪ್ರಸಾದ್ ಶೆಟ್ಟಿ ಹೆಸರಿನಿಂದ ಗುರುತಿಸಲ್ಪಟ್ಟಿದ್ದು, ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಸಂಸಾರದಲ್ಲಿ ವಿರಸವಾಗಿ ಸನ್ಯಾಸ ಸ್ವೀಕರಿಸಿದ್ದರು. ಪತ್ನಿ ಹಾಗೂ ಅವರ ತಾಯಿ ಧರ್ಮ ಚಾವಡಿ ಅನತಿ ದೂರದಲ್ಲಿರುವ ಪೂರ್ವಾಶ್ರಮದ ಮನೆಯಲ್ಲಿ ವಾಸವಿದ್ದರು. ಮಗಳು ವಿದೇಶದಲ್ಲಿದ್ದಾರೆ.

Leave a Comment

Your email address will not be published. Required fields are marked *