Ad Widget .

ಮಂಗಳೂರು: ಪ್ರತಿಷ್ಠಿತ ಕಾಲೇಜಿನ ವಿಧ್ಯಾರ್ಥಿಗಳ ಲಿಪ್ ಲಾಕ್| ಜಾಲತಾಣದಲ್ಲಿ ವಿಡಿಯೋ ವೈರಲ್…!!ವಿಡಿಯೋ ಮಾಡಿದ ವಿದ್ಯಾರ್ಥಿ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಇಲ್ಲಿ ಪ್ರತಿಷ್ಠಿತ ಕಾಲೇಜಿನ ವಿಧ್ಯಾರ್ಥಿಗಳ ಕಿಸ್ಸಿಂಗ್ ಸೀನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget . Ad Widget .

ಕಾಲೇಜಿನ ಯೂನಿಫಾರಂ ನಲ್ಲಿರುವ ವಿಧ್ಯಾರ್ಥಿಗಳು ಟ್ರೂತ್ ಆ್ಯಂಡ್ ಡೇರ್ ಗೇಮ್‍ನ್ನು ಆಡುತ್ತಿದ್ದರು. ಈ ವೇಳೆ ಪಂದ್ಯದ ನಿಯಮದಂತೆ ವಿದ್ಯಾರ್ಥಿನಿಯನ್ನು ವಿದ್ಯಾರ್ಥಿ ಚುಂಬಿಸಿದ್ದಾನೆ. ತನ್ನ ಸಹಪಾಠಿಗಳ ಎದುರೇ ಖುಲ್ಲಂ ಖುಲ್ಲಾ ವಿದ್ಯಾರ್ಥಿಗಳು ಚುಂಬಿಸಿದ್ದು, ಈ ದೃಶ್ಯವನ್ನು ಉಳಿದವರು ವೀಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

Ad Widget . Ad Widget .

20 ಸೆಕೆಂಡ್‌ಗಳ ಈ ವಿಡಿಯೋವನ್ನ ಯಾವುದೋ ಖಾಸಗಿ ರೂಮ್‌ನಲ್ಲಿ ತೆಗೆಯಲಾಗಿದೆ. ಮೇಲ್ನೋಟಕ್ಕೆ ಯುವಕರು ವಾಸ್ತವ್ಯ ಇರೋ ಕೊಠಡಿಯಂತೆ ಕಾಣುತ್ತಿದ್ದು, ವಿದ್ಯಾರ್ಥಿನಿಯರು ಅಲ್ಲಿಗೆ ತೆರಳಿರೋ ಸಾಧ್ಯತೆ ಇದೆ. ಸದ್ಯ ಮಂಗಳೂರು ಪೊಲೀಸರು ವಿದ್ಯಾರ್ಥಿನಿಯರು ‌ಮತ್ತು ಆ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯನ್ನ ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳು ದಾರಿ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ದೃಶ್ಯ ವೈರಲ್ ಆಗುತ್ತಿದ್ದಂತೆ, ಘಟನೆ ಸಂಬಂಧಿಸಿ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *