ಸಮಗ್ರ ನ್ಯೂಸ್: ಮದುವೆ ಆರತಕ್ಷತೆ ವೇಳೆಯೇ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊನ್ನೂರ ಸ್ವಾಮಿ (26) ಮೃತ ದುರ್ದೈವಿ.

ಮದುವೆ ಆರಕ್ಷತೆ ವೇಳೆ ಎಲ್ಲರೂ ಶುಭಕೋರುವ ಸಂದರ್ಭದಲ್ಲಿ ಎದೆ ನೋವಿನಿಂದ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ಹೊನ್ನೂರಸ್ವಾಮಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಸಲಹೆ ನೀಡಿದ್ದ ವೈದ್ಯರು, ಆಸ್ಪತ್ರೆಗೆ ಸಾಗಿಸೋ ದಾರಿ ಮಧ್ಯೆಯೇ ವರ ಹೊನ್ನೂರಸ್ವಾಮಿ ಮೃತಪಟ್ಟಿದ್ದಾರೆ. ಸಂಭ್ರಮದ ಮದುವೆ ಮನೆಯಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ.