Ad Widget .

ಸುಳ್ಯ: ಮುಸ್ಲಿಂ ಯುವಕನ ಮೇಲೆ ಹಲ್ಲೆ ಪ್ರಕರಣ| ಎಂಟು ಮಂದಿ ಆರೋಪಿಗಳ ಬಂಧನ|

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ ನಡೆಸಿ ಯುವಕನೋರ್ವ ಗಂಭೀರ ಗಾಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಆರೋಪದಲ್ಲಿ ಎಂಟು ಮಂದಿಯನ್ನು ಸುಳ್ಯದ ಬೆಳ್ಳಾರೆ ಠಾಣೆಯ ಪೊಲೀಸರು ಜು. 20ರಂದು ವಶಕ್ಕೆ ಪಡೆದಿದ್ದಾರೆ.

Ad Widget . Ad Widget .

ಕಾಸರಗೋಡು ಜಿಲ್ಲೆಯ ಮೊಗ್ರಾಲ್‌ ಪುತ್ತೂರಿನ ಮಸೂದ್‌ ಬಿ. (18) ಗಂಭೀರ ಗಾಯಗೊಂಡಿರುವವರು. ಈತ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Ad Widget . Ad Widget .

ಮಸೂದ್‌ ತಿಂಗಳ ಹಿಂದೆ ಸುಳ್ಯದ ಬೆಳ್ಳಾರೆ ಸಮೀಪದ ಕಳಂಜಕ್ಕೆ ಬಂದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರ. ಜು. 19ರ ಸಂಜೆ ಸುಧೀರ ಎಂಬಾತನಿಗೆ ಮಸೂದ್‌ ಅಂಗಡಿ ಬಳಿ ಕೈ ತಾಗಿದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಮಸೂದ್‌ ಸುಧೀರನಿಗೆ ಬಾಟಲಿ ತೋರಿಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಈ ವೇಳೆ ಅಲ್ಲೇ ಇದ್ದ ಅಭಿಲಾಷ್‌, ಸುನಿಲ್‌, ಸುಧೀರ್‌, ಶಿವ, ರಂಜಿತ್‌, ಸದಾಶಿವ, ಜಿಮ್‌ ರಂಜಿತ್‌, ಭಾಸ್ಕರ ಈ ವಿಚಾರವನ್ನು ಪೆಲತ್ತಡ್ಕದ ಇಬ್ರಾಹಿಂ ಶಾನೀಫ್ ಎಂಬವರಿಗೆ ತಿಳಿಸಿ, ವಿಚಾರವನ್ನು ಮಾತನಾಡಿ ಇತ್ಯರ್ಥಗೊಳಿಸುವ, ಮಸೂದ್‌ನನ್ನು ಜತೆಗೆ ಕರೆ ತನ್ನಿ ಎಂದಿದ್ದರು.

ಅದರಂತೆ ಅವರು ಸೂಚಿಸಿದ ಸ್ಥಳಕ್ಕೆ ಮಸೂದ್‌ನನ್ನು ರಾತ್ರಿ 11 ಗಂಟೆಗೆ ಕರೆದುಕೊಂಡು ಬಂದಿದ್ದ ವೇಳೆ ಹಲ್ಲೆ ಮಾಡಿದ್ದಾರೆ. ಅಭಿಲಾಷ್‌ ಎಂಬಾತ ಸ್ಥಳದಲ್ಲಿದ್ದ ಖಾಲಿ ಜ್ಯೂಸ್‌ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ಈ ವೇಳೆ ಮಸೂದ್‌ ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಹುಡುಕಾಟ ನಡೆಸಿದ ವೇಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ.

ಗಾಯಾಳುವನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಅನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಸೂದ್ ನನ್ನು ಕರೆಸಿ ಕೊಲೆ ಮಾಡುವ ಉದ್ದೇಶದಿಂದ ಕರೆಸಿ ಹಲ್ಲೆ ಮಾಡಿದ್ದಾರೆಂದು ಇಬ್ರಾಹಿಂ ಶಾನೀಫ್ ಬೆಳ್ಳಾರೆ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ.

ಆದರೆ ಸ್ಥಳೀಯ ಮಾಹಿತಿ ಪ್ರಕಾರ ಕಳಂಜದಲ್ಲಿ ಹಿಂದೂ-ಮುಸ್ಲಿಂ ಯುವಕರು ಸೌಹಾರ್ಧತೆಯಿಂದ ಬದುಕುತ್ತಿದ್ದು, ಮಸೂದ್ ಹೊರಗಿನಿಂದ ಬಂದಿರುವ ವ್ಯಕ್ತಿಯಾದ ಕಾರಣ ಯಾರೆಂದು ತಿಳಿಯದೆ ಹೊಡೆದಾಟ‌ ನಡೆದಿದೆ ಎನ್ನಲಾಗಿದೆ. ಪೊಲೀಸರ ತನಿಖೆಯಿಂದಷ್ಟೇ ನಿಖರ ಉತ್ತರ ಸಿಗಬೇಕಿದೆ.

Leave a Comment

Your email address will not be published. Required fields are marked *