ಸಮಗ್ರ ನ್ಯೂಸ್: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ರಿಲೀಫ್ ಸಿಕ್ಕಿದೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಟೌನ್ ಪೊಲೀಸರಿಂದ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ . ಸಾಕ್ಷಾಧಾರಗಳ ಕೊರತೆಯಿಂದಾಗಿ ಉಡುಪಿ ಟೌನ್ ಪೊಲೀಸರು ಬಿ . ರಿಪೋರ್ಟ್ ಸಲ್ಲಿಕೆ ಹಾಕಿದ್ದು , ವರದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ .
ಆದರೆ ಕೋರ್ಟ್ ಇನ್ನೂ ಉಡುಪಿ ಪೊಲೀಸರ ಬಿ .ರಿಪೋರ್ಟ್ ವರದಿಯನ್ನು ಅಂಗೀಕರಿಸಿಲ್ಲ . ಮುಂದಿನ ವಿಚಾರಣೆ ವೇಳೆ ಬಿ – ರಿಪೋರ್ಟ್ ಬಗ್ಗೆ ದೂರುದಾರರಿಗೆ ಮಾಹಿತಿ ನೀಡಲಾಗುತ್ತದೆ . ಆಗ ದೂರುದಾರರು ಬಿ ರಿಪೋರ್ಟ್ ಗೆ ವಿರೋಧ ಮಾಡಬಹುದು . ಇದರಿಂದ ಈಶ್ವರಪ್ಪಗೆ ಮೊದಲ ಹಂತದ ರಿಲೀಫ್ ಅಂತ ಹೇಳಬಹುದು .
ಈಶ್ವರಪ್ಪ ಅವರೇ ಆತ್ಮಹತ್ಯೆಗೆ ಕಾರಣ ಅನ್ನೋದಕ್ಕೆ ಸಾಕ್ಷ್ಯ ಸಿಕ್ಕಿಲ್ಲ . ಸಾಕ್ಷ್ಯಗಳ ಕೊರತೆ ಹಿನ್ನಲೆ ಬಿ . ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ ಎಂದು ಉಡುಪಿ ಪೊಲೀಸ್ ಮೂಲಗಳ ಮಾಹಿತಿ ನೀಡಿವೆ .