Ad Widget .

ಕಿಸ್ಸಿಂಗ್ ಬಳಿಕ ಸೆಕ್ಸ್ ನಲ್ಲಿ ತೊಡಗಿದ್ದ ವಿದ್ಯಾರ್ಥಿಗಳು| ಪೊಲೀಸರ ತನಿಖೆಯಿಂದ ಮತ್ತೊಂದು ವೈರಲ್ ವಿಡಿಯೋ ಪತ್ತೆ|

ಸಮಗ್ರ ನ್ಯೂಸ್: ಮಂಗಳೂರಿನ ಪ್ರತಿಷ್ಟಿತ ಕಾಲೇಜೊಂದರಲ್ಲಿ ಕಿಸ್ಸಿಂಗ್ ಸ್ಪರ್ಧೆ ಹೆಸರಲ್ಲಿ ಲಿಪ್ ಲಾಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ಪೊಲೀಸರಿಗೆ ಲಭ್ಯವಾಗಿದೆ. ಈ ವಿಡಿಯೋದಲ್ಲಿ ವಿದ್ಯಾರ್ಥಿ ಜೋಡಿಯೊಂದು ಕಿಸ್ಸಿಂಗ್ ಬಳಿಕ ಸೆಕ್ಸ್ ನಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

Ad Widget . Ad Widget .

ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವಿಡಿಯೋ ವೈರಲ್ ಆಗಿದ್ದು, ಲಿಪ್ ಕಿಸ್ ಬಳಿಕ ಹದಿ ಹರೆಯದ ವಿದ್ಯಾರ್ಥಿಗಳು ಸೆಕ್ಸ್‌ನಲ್ಲಿ ತೊಡಗಿರೋ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.

Ad Widget . Ad Widget .

ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ವಿಡಿಯೋ ಇದಾಗಿದ್ದು, ಹುಡುಗರ ಕೊಠಡಿಗೆ ತೆರಳಿ ಕಿಸ್ಸಿಂಗ್ ಸ್ಪರ್ಧೆ ಅನ್ನೋ ಹೆಸರಿನಲ್ಲಿ ಖುಲ್ಲಾಂಖುಲ್ಲಾ ಚುಂಬಿಸಿದ್ದರು. ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಅಲರ್ಟ್ ಆದ ಮಂಗಳೂರು ಸಿಸಿಬಿ ಪೊಲೀಸರು ವಿಡಿಯೋದ ಜಾಡು ಹಿಡಿದಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆತನ ವಿಚಾರಣೆ ನಡೆಸುತ್ತಿರುವಾಗಲೇ ಮತ್ತೊಂದು ವಿಡಿಯೋ ಪತ್ತೆಯಾಗಿದ್ದು, ಅದನ್ನೂ ಆತ ಸಾಮಾಜಿಕ ತಾಣಗಳಲ್ಲಿ ವೈರಲ್ ‌ಮಾಡಿರೋದು ಬೆಳಕಿಗೆ ಬಂದಿದೆ.

ಕಿಸ್ಸಿಂಗ್ ಸ್ಪರ್ಧೆ ‌ಹೆಸರಿನಲ್ಲಿ ಲಿಪ್ ಲಾಕ್ ಮಾಡಿದ ಬಳಿಕ ವಿದ್ಯಾರ್ಥಿನಿಯೊಬ್ಬಳು ವಿದ್ಯಾರ್ಥಿ ಜೊತೆಗೆ ಪೂರ್ತಿ ‌ನಗ್ನವಾಗಿ ಸೆಕ್ಸ್ ಮಾಡಿರುವ ವಿಡಿಯೋ ಮಾಡಲಾಗಿದೆ. ಸದ್ಯ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪೋಸ್ಕೋದಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಉಳಿದ ವಿದ್ಯಾರ್ಥಿಗಳನ್ನ ಪತ್ತೆ ಮಾಡಿ ಬಂಧಿಸಲು ಸಿದ್ದತೆ ನಡೆಸಿದ್ದಾರೆ.

ಇದು ನಿಜಕ್ಕೂ ಕಾಲೇಜಿಗೆ ಮಕ್ಕಳನ್ನು ಕಳುಹಿಸುವ ಪೋಷಕರು ಬೆಚ್ಚಿ ಬೀಳುವ ಸುದ್ದಿ. ತಮ್ಮ ಮಕ್ಕಳು ಕಾಲೇಜಿಗೆ ಹೋಗಿ ನೆಮ್ಮದಿಯಾಗಿ ಮನೆ ಸೇರುತ್ತಾರೆಂದು ಅಂದುಕೊಂಡರೆ ಎಲ್ಲಾ ವಿದ್ಯಾರ್ಥಿಗಳ ವಿಷಯದಲ್ಲಿ ಹಾಗಿರಲ್ಲ ಎಂಬುವುದಕ್ಕೆ ಮಂಗಳೂರಿನ ಈ ಕಾಲೇಜು ವಿದ್ಯಾರ್ಥಿಗಳ ವಿಡಿಯೋ ವೈರಲ್ ಪ್ರಕರಣ ಸಾಕ್ಷಿಯಾಗಿದೆ.

Leave a Comment

Your email address will not be published. Required fields are marked *