ಸಮಗ್ರ ನ್ಯೂಸ್: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಐದನೇ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದು 137 ಮತಗಳನ್ನು ಪಡೆದಿದ್ದಾರೆ. ಇದರಿಂದ ಸುನಕ್ ಬ್ರಿಟನ್ ಪ್ರಧಾನಿಯಾಗಲು ಇನ್ನೊಂದೇ ಮೆಟ್ಟಿಲು ಬಾಕಿ ಇದೆ.
ಇನ್ನು ಐದನೇ ಸುತ್ತಿನ ಮತದಾನದಲ್ಲಿ 105 ಮತಗಳನ್ನ ಪಡೆದ ವ್ಯಾಪಾರ ಸಚಿವ ಪೆನ್ನಿ ಮೊರ್ಡಾಂಟ್ ಪ್ರಧಾನಿ ರೇಸ್‌ನಿಂದ ಹೊರಗುಳಿದಿದ್ದಾರೆ. ಈಗ ಸುನಕ್, ಲಿಜ್ ಟ್ರಸ್ ಅವರನ್ನು ಎದುರಿಸಲಿದ್ದು, ಅವರು 113 ಮತಗಳನ್ನ ಪಡೆದಿದ್ದಾರೆ.
ಎಲ್ಲಾ ಐದು ಹಂತಗಳಲ್ಲಿ ರಿಷಿ ಸುನಕ್ ಅತಿ ಹೆಚ್ಚು ಮತಗಳನ್ನ ಪಡೆದಿದ್ದಾರೆ. ನಾಲ್ಕನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನ ಪಡೆದಿದ್ರೆ, ಸೋಮವಾರ ನಡೆದ ಮೂರನೇ ಸುತ್ತಿನ ಮತದಾನದಲ್ಲಿ 115 ಮತಗಳನ್ನ ಪಡೆದಿದ್ದರು. ಇನ್ನು ಇದೇ ವೇಳೆ ಎರಡನೇ ಸುತ್ತಿನಲ್ಲಿ 101 ಮತಗಳು ಹಾಗೂ ಮೊದಲ ಸುತ್ತಿನಲ್ಲಿ 88 ಮತಗಳು ಚಲಾವಣೆಯಾದವು. ಸುನಕ್ ಎಲ್ಲಾ ಹಂತಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ.