Ad Widget .

ಬೆಳಗಾವಿ: ಕಾಂಗ್ರೆಸ್ ನಾಯಕಿ ನವ್ಯಶ್ರೀ ಮೇಲೆ ಕೇಸ್ ದಾಖಲು| ಹೊಸತೊಂದು ಆಡಿಯೋ ರಿಲೀಸ್ ಮಾಡಿದ ನವ್ಯಶ್ರೀ

ಸಮಗ್ರ ನ್ಯೂಸ್: ಕಾಂಗ್ರೆಸ್ ಯುವ ಕಾರ್ಯಕರ್ತೆ ನವ್ಯಶ್ರೀ ವಿರುದ್ಧ ಕೇಸ್ ದಾಖಲಾಗಿರುವ ವಿಚಾರ ಸಂಬಂಧ ಇದೀಗ ನವ್ಯಶ್ರೀ ಆಡಿಯೋ ರಿಲೀಸ್ ಮಾಡಿದ್ದಾರೆ. ರಾಜಕುಮಾರ, ನವ್ಯಶ್ರೀ ಮತ್ತು ನವ್ಯಶ್ರೀ ಆಪ್ತ ತಿಲಕ್ ಜೊತೆಯಾಗಿ ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

Ad Widget . Ad Widget .

ರಿಲೀಸ್ ಮಾಡಿರುವ ಆಡಿಯೊ ಸಂಭಾಷಣೆಯಲ್ಲಿ, ನಾನು ಒಪ್ಪಿಕೊಂಡಿದ್ದೇನೆ, ಅವಳು ಒಪ್ಪಿಕೊಂಡಿದ್ದಾಳೆ ನನ್ನ ಹೆಂಡತಿಯನ್ನೂ ಒಪ್ಪಿಸುತ್ತೇನೆ. ನನ್ನ ಹೆಂಡತಿ ಮಕ್ಕಳ ಜೊತೆಗೆ ಮನೆಯಲ್ಲಿ ಇಟ್ಟುಕೊಳ್ಳುತ್ತೇನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ. ನನ್ನ ಮಗಳಿಗೂ ಹೇಳಿದ್ದೇನೆ ಏನೂ ತೊಂದರೆ ಇಲ್ಲಾ ಎಂದು ರಾಜಕುಮಾರ ಹೇಳಿರುವುದು ಬಯಲಾಗಿದೆ.

Ad Widget . Ad Widget .

ನವ್ಯಶ್ರೀ ಸುಲಿಗೆ, ಮಾನಸಿಕ ಹಿಂಸೆ, ಸುಳ್ಳು ಅತ್ಯಾಚಾರ ಕೇಸ್ ದಾಖಲಿಸಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ದೂರು ನೀಡಿದ್ದರು. ಟಾಕಳೆ ನೀಡಿದ ದೂರಿನ ಮೇರೆಗೆ ನವ್ಯಶ್ರೀ ವಿರುದ್ಧ ಐಪಿಸಿ ಸೆಕ್ಷನ್ 384, 448, 504, 506, 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ನವ್ಯಶ್ರೀ ಹೇಳಿದ್ದೇನು..?
ತೋಟಗಾರಿಕೆ ಇಲಾಖೆಯ ನನ್ನ ಗಂಡ ಅವನಿಂದ ನನಗೆ ಏನು ಮೋಸ ಆಗಿದೆ..? ಮೋಸ ಹೇಗಾಯ್ತು ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು 15 ದಿನಗಳಿಂದ ಇಂಡಿಯಾದಲ್ಲೇ ಇರಲಿಲ್ಲ. ವಿದೇಶದಿಂದ ನಾನು ಬಂದಿದ್ದೇ ಇವತ್ತು. ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವೀಡಿಯೋ ವೈರಲ್ ಆಗಿರುವುದು ಗೊತ್ತಾಗಿದೆ. ನಾನು ಬೆಳಗಾವಿ ಪೊಲೀಸ್ ಆಯುಕ್ತರ ಬಳಿ ದೂರು ಕೊಡುತ್ತೇನೆ. ನನ್ನ ಮೇಲೆ ಎಫ್‍ಐಆರ್ ಆಗಿರುವ ಬಗ್ಗೆ ಮಾಹಿತಿಯಿಲ್ಲ. ಇಲ್ಲಿವರೆಗೂ ಯಾವುದೇ ಪೊಲೀಸರು ನನಗೆ ಫೋನ್ ಮಾಡಿಲ್ಲ ಎಂದು ಹೇಳಿದ್ದಾರೆ.

ಮೊದಲು ನಾನು ಕಂಪ್ಲೇಟ್ ಪ್ರತಿ ಪಡೆಯುತ್ತೇನೆ. ರಾಜಕುಮಾರ ಟಾಕಳೆ ನನ್ನ ಗಂಡ. ಅವನಿಂದ ನನಗೆ ಏನು ಮೋಸ ಆಗಿದೆ? ಅನ್ನೋದನ್ನ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಾನು ಯಾವ ರೀತಿ ಮದುವೆ ಆಗಿದ್ದೇನೆ ಅನ್ನೋದನ್ನೂ ಪ್ರೆಸ್‍ಮೀಟ್ ಮಾಡಿ ಹೇಳುತ್ತೇನೆ, ಎಲ್ಲರ ಪ್ರಶ್ನೆಗೂ ಉತ್ತರ ಕೊಡ್ತೇನೆ ಎಂದು ತಿಳಿಸಿದ್ದಾರೆ.

ರಾಜಕುಮಾರ ಟಾಕಳೆ ಹೇಳಿದ್ದೇನು?
ನವ್ಯಶ್ರೀ ಆರ್. ರಾವ್ ವಿರುದ್ಧ ದೂರು ನೀಡಿದ್ದ ರಾಜಕುಮಾರ ಟಾಕಳೆ, ಈ ಹಿಂದೆ ನಾನು ಮಾಜಿ ಸಚಿವ ಶ್ರೀಮಂತ ಪಾಟೀಲ್ ಪಿಎ ಆಗಿ ಕಾರ್ಯನಿರ್ವಹಿಸುವಾಗ ಬೆಂಗಳೂರಿನಲ್ಲಿದ್ದೆ. ಆಗ ನವ್ಯಶ್ರೀ ರಾವ್ ಸಾಮಾಜಿಕ ಕಾರ್ಯಕರ್ತೆ ಎಂದು ಪರಿಚಯವಾಗಿದ್ದರು. ಇದಾದ ಬಳಿಕ ಡಿಸೆಂಬರ್ 2020ರಲ್ಲಿ ಸಂದರ್ಭದಲ್ಲಿ ನವ್ಯಶ್ರೀ ಅವರು ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಸಾಮಾಜಿಕ ಕಾರ್ಯಕರ್ತೆ ಅಂತಾ ಪರಿಚಯ ಮಾಡಿಕೊಂಡಿದ್ದರು.

ಚನ್ನಪಟ್ಟಣದಲ್ಲಿ ನವ್ಯ ಫೌಂಡೇಶನ್ ಹೆಸರಿನ ಎನ್‍ಜಿಒ ನಡೆಸುವುದಾಗಿ ತಿಳಿಸಿದ್ದರು. ನನಗೆ ಮದುವೆಯಾಗಿ ಮೂರು ಮಕ್ಕಳಿವೆ ಎಂದು ಗೊತ್ತಿದ್ದರೂ ಪರಿಚಯ ಬೆಳೆಸಿ ಸಲುಗೆಯಿಂದ ಇದ್ದರು. ಒಂದೂವರೆ ವರ್ಷದ ಪರಿಚಯದಲ್ಲಿ ನಾನು ಬೇರೆಬೇರೆ ಸ್ಥಳ ಸೇರಿ ಬೆಳಗಾವಿಯಲ್ಲಿ ಭೇಟಿಯಾಗಿದ್ದೆವು. ಇದಾದ ಬಳಿಕ 2021ರ ಡಿಸಂಬರ್ 24ರಂದು ನನಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

50 ಲಕ್ಷ ಹಣ ನೀಡದಿದ್ರೆ ನನ್ನ ಪತ್ನಿ, ಸಂಬಂಧಿಕರು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಬಳಿಕ ತನ್ನ ಮನೆಗೆ ಬಂದು ತನ್ನ ಬೇಡಿಕೆ ಈಡೇರುವವರೆಗೂ ಮನೆ ಬಿಟ್ಟು ಹೋಗಲ್ಲ ಅಂತಾ ಸುಳ್ಳು ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಇದರ ಜೊತೆಗೆ ನನಗೆ ಮತ್ತು ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಎಂದು ರಾಜಕುಮಾರ ಟಾಕಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ

Leave a Comment

Your email address will not be published. Required fields are marked *