ಸಮಗ್ರ ನ್ಯೂಸ್: ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಕಂಬಳ ಓಟಗಾರ ಶ್ರೀನಿವಾಸಗೌಡ ಸೇರಿ ಮೂವರ ವಿರುದ್ಧ ವಂಚನೆ ಕ್ರಿಮಿನಲ್ ದೂರು ನೀಡಲಾಗಿದೆ.
ಮಂಗಳೂರಿನ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ದೂರು ನೀಡಿದ್ದಾರೆ. ಶ್ರೀನಿವಾಸಗೌಡ, ಗುಣಪಾಲ ಕಡಂಬ, ರತ್ನಾಕರ ಅವರ ವಿರುದ್ಧ ದೂರು ನೀಡಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸಾರ್ವಜನಿಕರಿಗೆ ವಂಚಿಸಿದ್ದಾರೆ. ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಅಧಿಕೃತ ಮಾನ್ಯತೆ ಪಡೆಯದ ಸ್ಕೈವೀವ್ ಸಂಸ್ಥೆಯಿಂದ ಸುಳ್ಳು ತೀರ್ಪು ನೀಡಲಾಗಿದೆ. ಲೇಸರ್ ಭೀಮ್ ಮೂಲಕ ಕಂಬಳದ ಫಲಿತಾಂಶ ಘೋಷಣೆ ಮಾಡಲಾಗಿದೆ.
ಸ್ಕೈವೀವ್ ಮಾಲೀಕ ರತ್ನಾಕರ ವಿರುದ್ಧ ದೂರು ದಾಖಲಿಸಲಾಗಿದೆ. 100 ಮೀಟರ್ ದೂರವನ್ನು ಶ್ರೀನಿವಾಸ ಗೌಡ 9.55 ಸೆಕೆಂಡ್ ನಲ್ಲಿ ಕ್ರಮಿಸಿದ್ದರು. 2021ರ ಫೆಬ್ರವರಿ 1 ರಂದು ಐಕಳ ಕಂಬಳದಲ್ಲಿ ಶ್ರೀನಿವಾಸಗೌಡ ಸಾಧನೆ ಮಾಡಿದ್ದರು. ಉಸೇನ್ ಬೋಲ್ಟ್ 9.58 ಸೆಕೆಂಡ್ ನಲ್ಲಿ ಕ್ರಮಿಸಿದ ದಾಖಲೆ ಉಡೀಸ್ ಆಗಿತ್ತು. ರಾಜ್ಯ ಸರ್ಕಾರ ಸೇರಿದಂತೆ ಹಲವು ಸಂಸ್ಥೆಗಳಿಂದ ಶ್ರೀನಿವಾಸಗೌಡನಿಗೆ ನೆರವು ನೀಡಲಾಗಿತ್ತು. ಪೊಲೀಸರು ತನಿಖೆ ನಡೆಸದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡಲಾಗುವುದು. ಶ್ರೀನಿವಾಸ ಗೌಡರ ಮೂಲಕ ಕಂಬಳ ಅಕಾಡೆಮಿ ನಡೆಸುತ್ತಿರುವ ಗುಣಪಾಲ ಕಡಂಬ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.