Ad Widget .

MRPL ನಲ್ಲಿ‌‌ ಕಾಣಿಸಿಕೊಂಡ ದಟ್ಟ ಹೊಗೆ; ಆತಂಕದಲ್ಲಿ ಮಂಗಳೂರು

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಮತ್ತೆ MRPL ಪ್ರದೇಶದಲ್ಲಿ ಆತಂಕ ಮೂಡಿಸಿದ್ದು, MRPLನಿಂದ ರಾತ್ರಿಯಿಡೀ ಭಾರೀ ಹೊಗೆ ಕಾಣಿಸಿಕೊಂಡಿದೆ. ಹೀಗಾಗಿ ಮಂಗಳೂರಿಗರು ರಾತ್ರಿಯಿಡೀ ಆತಂಕದಿಂದ ಕಾಲ ಕಳೆಯುವಂತಾಯಿತು.

Ad Widget . Ad Widget .

ಮಂಗಳೂರು ರಿಫೈನರಿ ಪೆಟ್ರೋ ಕೆಮಿಕಲ್​​​​ ಕಂಪನಿ ಆತಂಕ ಮೂಡಿಸಿದೆ. MRPLನಿಂದ ರಾತ್ರಿಯಿಡೀ ಭಾರೀ ಹೊಗೆ ಕಾಣಿಸಿಕೊಂಡಿದೆ. ಬಾನೆತ್ತರಕ್ಕೆ ಹಾರುತ್ತಿದ್ದ ಹೊಗೆ ಕಂಡು ಜನರು ತೀವ್ರ ಆತಂಕಗೊಂಡರು. MRPL ಸುಮಾರು 5000 ಎಕರೆ ಪ್ರದೇಶದಲ್ಲಿದೆ. ಮಧ್ಯರಾತ್ರಿ ನಂತರ ಪೆಟ್ರೋಲ್​​ ವಾಸನೆ ಜತೆ ಹೊಗೆ ಕಾಣಿಸಿಕೊಂಡಿದೆ. ಪದೇ-ಪದೇ MRPLನಲ್ಲಿ ಬೆಂಕಿ ಅವಘಡ ಸಂಭವಿಸುತ್ತವೆ. ಸದ್ಯ ಯಾವುದೇ ಅವಘಡ ಸಂಭವಿಸಿಲ್ಲ, ಜನರು ಆತಂಕ ಪಡಬೇಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *