Ad Widget .

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲ್ಲ – ಸಿದ್ದರಾಮಯ್ಯ| ಅಂಗಳ ಅಳೆಯಲಾಗದವ ಆಕಾಶ ಅಳೆಯಲು ಹೊರಟಿದ್ದಾನೆ – ಬಿಜೆಪಿ

ಸಮಗ್ರ ನ್ಯೂಸ್: ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ನನ್ನನ್ನು ಸೋಲಿಸಿದ್ದು, ಮತ್ತೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Ad Widget . Ad Widget .

ಸಿದ್ದರಾಮಯ್ಯ ಈ ಮಾತಿಗೆ ಬಿಜೆಪಿ ವ್ಯಂಗ್ಯವಾಡಿದ್ದು, ಸರಣಿ ಟ್ವೀಟ್ ಮೂಲಕ ಕಾಲೆಳೆದಿದೆ.

Ad Widget . Ad Widget .

ಸ್ಪರ್ಧಿಸಿ ಗೆಲ್ಲಲು ಸೂಕ್ತ ಕ್ಷೇತ್ರವಿಲ್ಲದ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ, ಬಾದಾಮಿಯಲ್ಲಿ ಗೆಲ್ಲಲ್ಲ, ಚಾಮರಾಜಪೇಟೆ ದಕ್ಕಲ್ಲ! ಅಂಗಳ ಅಳೆಯಲು ಸಾಧ್ಯವಿಲ್ಲದ ವ್ಯಕ್ತಿಯಿಂದ ಆಕಾಶ ಅಳೆಸಲು ಹೊರಟಿರುವುದು ಹಾಸ್ಯಾಸ್ಪದವಲ್ಲವೇ ಎಂದಿದೆ.

ಅಮೃತ ಮಹೋತ್ಸವ ಆಚರಣೆ‌ಗೆ ಹೊಸ ರೇಷ್ಮೆ ಪಂಚೆ ಖರೀದಿಸಿರುವ ಸಿದ್ದರಾಮಯ್ಯ ತುರ್ತಾಗಿ ಒಂದು ದಶಮಾನೋತ್ಸವ ಆಚರಣೆ ಮಾಡಬೇಕು. ಏಕೆಂದರೆ, ಇದೇ ನನ್ನ ಕೊನೆ ಚುನಾವಣೆ ಎಂದು ಘೋಷಿಸಿ ದಶಕದ ಕಾಲವಾಗಿದೆ. ಘೋಷಣೆಗಳು ಮಾತ್ರ ನಿರಂತರವಾಗಿದೆ ಎಂದು ವ್ಯಂಗ್ಯವಾಡಿದೆ.

Leave a Comment

Your email address will not be published. Required fields are marked *