ಕಾರು ಮತ್ತು ಲಾರಿ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು

ಸಮಗ್ರ ನ್ಯೂಸ್ : ಕಾರು – ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಾಲಯ್ಯ ಕ್ಯಾಂಪ್ ಬಳಿ ಸೋಮವಾರ ಮುಂಜಾನೆ ( ಜು.18 ರಂದು) ನಡೆದಿದೆ.

Ad Widget ... ..

ಮೃತರನ್ನು ಮಧ್ಯಪ್ರದೇಶ ಮೂಲದ ಅಮರದೀಪ್‌ ಸೆಕ್ಸೇನಾ​ (35), ಪೂರ್ಣಿಮಾ ಸೆಕ್ಸೇನಾ (30) ಮಕ್ಕಳಾದ ಜಿತಿನ್​ (12) ಮತ್ತು ಮಾಹೀನ್​ (7) ಎಂದು ಗುರುತಿಸಲಾಗಿದೆ.

Ad Widget

ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿದ್ದು, ದುರ್ಘಟನೆ ಸಂಭವಿಸಿದೆ. ಮೃತ ನಾಲ್ವರು ಮೂಲದವರು ಎಂದು ಗುರುತಿಸಲಾಗಿದೆ. ಎರಡು ಜೆಸಿಬಿಯಿಂದ ಅಪಘಾತ ವಾಹನಗಳ ತೆರವು ಮಾಡಿದ್ದು, ಮೃತ ದೇಹಗಳನ್ನು ಸಿಂಧನೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *