“ಅದು ಕನ್ನಡ್ ಅಲ್ಲ ಕನ್ನಡ ” | ಸುದೀಪ್ ಮಾತು ವೈರಲ್

ಸಮಗ್ರ ನ್ಯೂಸ್: ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ವಿಕ್ರಾಂತ್ ರೋಣ ಪ್ರಚಾರ ಕಾರ್ಯ ದೆಹಲಿ ಸೇರಿದಂತೆ ಹಲವೆಡೆ ಭರ್ಜರಿಯಾಗಿ ನಡೆಯುತ್ತಿದೆ. ಈ ಮಧ್ಯೆ ಪ್ರಚಾರ ಕಾರ್ಯದಲ್ಲಿ ಕಿಚ್ಚನ ಒಂದು ಮಾತು ಕನ್ನಡಿಗರ ಅಭಿಮಾನ ಹೆಚ್ಚು ಮಾಡಿದೆ.

Ad Widget ... ..

ಈ ಮೊದಲು ಹಿಂದಿ ರಾಷ್ಟ್ರಭಾಷೆಯ ಕುರಿತು ಬಾಲಿವುಡ್ ನಟ ಅಜಯ್ ದೇವಗನ್ ಜೊತೆಗಿನ ಟ್ವೀಟ್ ವಾರ್‌ನಿಂದ ಕನ್ನಡಾಭಿಮಾನ ಮೆರೆದಿದ್ದ ಸುದೀಪ್‌, ಇದೀಗ ಸ್ಟೇಜ್ ಮೇಲೆ ಕನ್ನಡದ ಬಗೆಗಿನ ಅವರ ಮಾತು ಫುಲ್ ವೈರಲ್ ಆಗುತ್ತಿದೆ.

Ad Widget

ನಿನ್ನೆ ವಿಕ್ರಾಂತ್ ರೋಣ ಸಿನಿಮಾದ ಕುರಿತು ಸುದ್ದಿಗೋಷ್ಠಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿನಿಧಿಸುವ ವ್ಯಕ್ತಿಯೊಬ್ಬರು ಸಿನಿಮಾ ಬಗ್ಗೆ ಹಾಗೂ ಕನ್ನಡ ಸಿನಿರಂಗದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಅವರು ಕನ್ನಡ್ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಕನ್ನಡ ಭಾಷೆ ಬರದ ಹಲವಾರು ಜನರು ಕನ್ನಡ ಎಂದು ಉಚ್ಛರಣೆ ಮಾಡಲ್ಲ. ಕನ್ನಡ್ ಎಂದು ಹೇಳುತ್ತಾರೆ.

ಹಾಗೆಯೇ ಈ ವ್ಯಕ್ತಿ ಸಹ ಕನ್ನಡ್‌ ಎಂದು ಹೇಳಿದ್ದಾರೆ. ಅದಕ್ಕೆ ನಟ ಸುದೀಪ್‌ ಅದು ಕನ್ನಡ್ ಅಲ್ಲ ಕನ್ನಡ ಎಂದು ಹೇಳಿಕೊಟ್ಟಿದ್ದಾರೆ. ಸದ್ಯ ಸುದೀಪ್‌ ಅವರ ಈ ವಿಡಿಯೋ ಎಲ್ಲೆಡೆ ಫುಲ್ ವೈರಲ್ ಆಗುತ್ತಿದೆ. ಅಲ್ಲದೇ ಕನ್ನಡಿಗರು ಮತ್ತೊಮ್ಮೆ ಸುದೀಪ್‌ ಬಾಷಾಭಿಮಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *