Ad Widget .

ಮೇಕೇರಿ ಬಳಿ‌ ರಸ್ತೆ ಕುಸಿತ| ಮಡಿಕೇರಿ- ಮಂಗಳೂರು ಸಂಚಾರ ಸಂಪೂರ್ಣ ಬಂದ್

ಸಮಗ್ರ ನ್ಯೂಸ್: ಮಡಿಕೇರಿಯಿಂದ ಮಂಗಳೂರಿಗೆ ಮೇಕೇರಿ ತಾಳತ್ ಮನೆ ಮಾರ್ಗವಾಗಿ ಪರ್ಯಾಯ ರಸ್ತೆಯಿಂದ ವಾಹನಗಳು ಸಂಚರಿಸುತ್ತಿದ್ದು, ಈ ರಸ್ತೆಯಲ್ಲೂ ಕುಸಿತ ಉಂಟಾಗಿರುವ ಕಾರಣ ಮಂಗಳೂರು- ಮಡಿಕೇರಿ ಸಂಪರ್ಕ ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಕರಾವಳಿಗೆ ಇದ್ದ ಕೊನೆಯ ಸಂಪರ್ಕ ರಸ್ತೆಯೂ ಮುಚ್ಚಿದಂತಾಗಿದೆ.

Ad Widget . Ad Widget .

ಮಡಿಕೇರಿ ಜಿಲ್ಲಾಧಿಕಾರಿ ಕಚೇರಿ ಬಳಿ ತಡೆಗೋಡೆ ಕುಸಿತದ ಭೀತಿಯ ಕಾರಣ ಮಡಿಕೇರಿ- ಮಂಗಳೂರು ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಇದೀಗ ಈ ರಸ್ತೆಯೂ ಕುಸಿತ ಕಂಡಿದ್ದು ಎಲ್ಲಾ ವಾಹನಗಳನ್ನು ಸಂಪಾಜೆ ಗೇಟ್ ಬಳಿ ತಡೆ ಹಿಡಿಯಲಾಗಿದೆ. ಸಂಪಾಜೆ ಘಾಟ್ ನಲ್ಲಿ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *