Ad Widget .

ಸಚಿವ ಅಂಗಾರರದ್ದು ಪ್ರಜಾಪ್ರಭುತ್ವದ ಕಗ್ಗೊಲೆ; ಅನ್ಯಾಯವಾದವರಿಗೆ ನ್ಯಾಯ ಸಿಗಲೇಬೇಕು – ಬ್ಲಾಕ್ ಕಾಂಗ್ರೆಸ್

ಸಮಗ್ರ ನ್ಯೂಸ್: ಕಳೆದ ಮೂವತ್ತು ವರ್ಷಗಳಿಂದ ಶಾಸಕರಾಗಿದ್ದು ನನಗೆ ಯಾರೂ ಆಡಳಿತ ಹೇಳಿಕೊಡಬೇಕಾಗಿಲ್ಲ ಎಂದು ಹೇಳುತ್ತಿರುವ ಸಚಿವ ಎಸ್.ಅಂಗಾರರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕಾರ್ಯಕರ್ತರಲ್ಲದವರಿಗೆ ಯೋಜನೆಯ ಲಾಭಕ್ಕೆ ಕೊಕ್ಕೆ ಹಾಕಿದ್ದು ಇದು ಅನ್ಯಾಯ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ ಹೇಳಿದ್ದಾರೆ.

Ad Widget . Ad Widget .

ಬಿಜೆಪಿ ಸುಳ್ಯ ಕಚೇರಿ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿರುವ ಆಡಿಯೋ ಕುರಿತಂತೆ ಪ್ರತಿಕ್ರಿಯಿಸಿದ ಅವರು ‘ಚುನಾಯಿತ ಜನಪ್ರತಿನಿಧಿಯಾಗಿ ಸಚಿವ ಅಂಗಾರರು ರಾಜ್ಯದ ಎಲ್ಲಾ ಜನರಿಗೆ ಸಮಾನರಾಗಿರಬೇಕು. ಪಕ್ಷಕ್ಕೆ ಸಂಬಂಧಪಟ್ಟವರಿಗೆ ಮಾತ್ರ ಯೋಜನೆಗಳ ಲಾಭಕ್ಕೆ ಶಿಫಾರಸು ಮಾಡುವುದು‌ ಸರಿಯಲ್ಲ. ಜನಪ್ರತಿನಿಧಿ ಪಕ್ಷದ ಪ್ರತಿನಿಧಿಯಾಗಬಾರದು’ ಎಂದು ಹೇಳಿದ್ದಾರೆ.

Ad Widget . Ad Widget .

ಆಲೆಟ್ಟಿ ಗ್ರಾಮದ ರಂಗತ್ತಮಲೆ ರಾಮಚಂದ್ರ ನಾಯ್ಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ವ್ಯವಸ್ಥೆ ಮಾಡಬೇಕು. ಅದಲ್ಲದೇ ಇದೇ ರೀತಿ ಯಾರಿಗೂ ಅನ್ಯಾಯ ಮಾಡುವುದು ಸರಿಯಲ್ಲ. ಇದು ಸ್ವಜನ ಪಕ್ಷಪಾತ ಧೋರಣೆ ಎಂದು ಖಂಡಿಸಿದ್ದಾರೆ.

Leave a Comment

Your email address will not be published. Required fields are marked *