Ad Widget .

ಮಂಗಳೂರು: ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನ| ಆರೋಪಿಯ ಬಂಧನ

ಸಮಗ್ರ ನ್ಯೂಸ್: ವಿಧ್ಯಾರ್ಥಿನಿಯೊಬ್ಬಳ ಮನೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Ad Widget . Ad Widget .

ಬಂಧಿತ ಆರೋಪಿಯನ್ನು ಪಂಜಿಮೊಗರಿನ ಮುಸ್ತಫಾ (35) ಎಂದು ಗುರುತಿಸಲಾಗಿದೆ. ಆರೋಪಿಯು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದ ತರಕಾರಿ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ವಿಧ್ಯಾರ್ಥಿನಿಯ ನಂಬರ್ ಪಡೆದುಕೊಂಡ ಆರೋಪಿ ಆಕೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ.

Ad Widget . Ad Widget .

ಅಲ್ಲದೆ ಆರೋಪಿ ಜುಲೈ 8ರಂದು ರಾತ್ರಿ 8.30ಕ್ಕೆ ವಿದ್ಯಾರ್ಥಿನಿಯ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಾನಭಂಗಕ್ಕೆ ಯತ್ನಿಸಿದ್ದಲ್ಲದೆ ಕೃತ್ಯವನ್ನು ಇತರರಿಗೆ ಹೇಳಿದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಆದರೆ ವಿದ್ಯಾರ್ಥಿನಿ ಹೆದರಿ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ. ಜುಲೈ 16ರಂದು ತಾಯಿಗೆ ವಿಷಯ ತಿಳಿಸಿದ ಬಳಿಕ ವಿದ್ಯಾರ್ಥಿನಿ ದೂರು ನೀಡಿದ್ದು, ಅದರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಹಿಳಾ ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *