Ad Widget .

ದ್ವಾದಶ ರಾಶಿಗಳ ವಾರ ಭವಿಷ್ಯ

ಸಮಗ್ರ ನ್ಯೂಸ್: ಜುಲೈ ಎರಡನೇ ವಾರದಲ್ಲಿ ನಾವಿದ್ದೇವೆ. ಈ ವಾರ ರಾಶಿಗೆ ಏನು ಫಲ? ದೋಷ ಪರಿಹಾರಗಳೇನು? ಹೀಗೆ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ.

Ad Widget . Ad Widget .

ಮೇಷ ರಾಶಿ: ರೈತಾಪಿ ವರ್ಗದವರು ನೀರಿನಲ್ಲಿ ಕೆಲಸ ಮಾಡುವಾಗ ಎಚ್ಚರವಹಿಸುವುದು ಒಳ್ಳೆಯದು. ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಹಣದ ಒಳಹರಿವು ನಿಧಾನ ಸಾಧ್ಯತೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ನ್ಯಾಯಾಲಯಕ್ಕೆ ಸಂಬಂಧಪಟ್ಟ ವಿಚಾರಗಳಲ್ಲಿ ಪ್ರಗತಿ. ವಿದ್ಯಾರ್ಥಿಗಳಿಗೆ ಅಭಿವೃದ್ಧಿಯ ಕಾಲ. ಹೆಚ್ಚು ಸಾಲ ಮಾಡುವುದು ಬೇಡ. ಅದಿರು ವ್ಯವಹಾರವನ್ನು ಮಾಡುವವರಿಗೆ ವಿದೇಶಕ್ಕೆ ರಫ್ತು ಮಾಡಲು ಅವಕಾಶ ದೊರೆಯುತ್ತದೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸುವುದು ಒಳ್ಳೆಯದು. ವೃತ್ತಿಯಲ್ಲಿ ಗೌರವ ಹೆಚ್ಚಾಗುತ್ತದೆ. ಹೈನುಗಾರಿಕೆಯನ್ನು ಮಾಡುವವರಿಗೆ ಸ್ವಲ್ಪ ಮುನ್ನಡೆ ಇರುತ್ತದೆ. ಆಹಾರ ವಸ್ತುಗಳ ತಯಾರಕರಿಗೆ ಕಚ್ಚಾ ಪದಾರ್ಥಗಳ ಕೊರತೆ ನಿವಾರಣೆಯಾಗುತ್ತದೆ.

Ad Widget . Ad Widget .

ವೃಷಭರಾಶಿ:
ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ನಿರ್ವಹಣೆ ಮಾಡುವುದರಿಂದ ನಾಯಕತ್ವ ಪ್ರಾಪ್ತಿಯಾಗುತ್ತದೆ. ದ್ವಂದ್ವ ನಿರ್ಧಾರಗಳಲ್ಲಿ ಯಾವ ಕೆಲಸವನ್ನು ಆರಂಭಿಸಬೇಡಿರಿ. ಹಣದ ಒಳಹರಿವು ಅಪೇಕ್ಷೆಗೆ ತಕ್ಕಂತೆ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವ ಕೆಲವರಿಗೆ ಹುದ್ದೆಗಳು ತಪ್ಪಬಹುದು ಕೆಲವರಿಗೆ ಹೊಸ ಹುದ್ದೆಗಳು ಸಿಗಬಹುದು. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಆರೋಗ್ಯ ಸಿಬ್ಬಂದಿಯ ಕೆಲವು ಬೇಡಿಕೆಗಳು ಈಡೇರುತ್ತವೆ. ಲೇವಾದೇವಿ ವ್ಯವಹಾರದಿಂದ ದೂರ ಉಳಿಯುವುದು ಒಳ್ಳೆಯದು. ಹಿರಿಯರಿಂದ ಭೂಮಿ ಅಥವಾ ಆಸ್ತಿ ಒದಗಿ ಬರುವ ಸಾಧ್ಯತೆ ಇದೆ. ಹೈನುಗಾರಿಕೆ ಮಾಡುವವರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ವೃತ್ತಿಯಲ್ಲಿ ಮೇಲ್ದರ್ಜೆಗೇರುವ ಸಂಭವ ಹೆಚ್ಚಾಗಿದೆ.

ಮಿಥುನ ರಾಶಿ:
ಸಮುದ್ರ ದಡದಲ್ಲಿ ಕೆಲಸ ಮಾಡುವವರು ಸಾಕಷ್ಟು ಎಚ್ಚರಿಕೆ ವಹಿಸಿ. ಕುಟುಂಬದಲ್ಲಿ ನೆಮ್ಮದಿಯನ್ನು ಕಾಣಬಹುದು. ಹಣದ ಒಳಹರಿವು ನಿಮ್ಮ ಅಗತ್ಯತೆಯನ್ನು ಪೂರೈಸುತ್ತದೆ. ಮಹಿಳೆಯರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ಇದೆ. ಕೆಲವರಿಗೆ ರಾಜಕೀಯ ವ್ಯಕ್ತಿಗಳ ಸಹಾಯದಿಂದ ಕಚೇರಿ ಕೆಲಸಗಳು ಸುಗಮವಾಗಿ ಆಗುವವು. ವಿದ್ಯಾರ್ಥಿಗಳಿಗೆ ಅಧ್ಯಯನದ ಮೇಲೆ ಏಕಾಗ್ರತೆ ಕಡಿಮೆಯಾದರೂ ಗುರಿ ಸಾಧನೆಗೆ ತೊಡಕಾಗುವುದಿಲ್ಲ. ವಿಹಾರ ಮತ್ತು ಔತಣ ಕೂಟಗಳನ್ನು ಏರ್ಪಡಿಸುವ ಸಂಸ್ಥೆಗಳ ವ್ಯವಹಾರಗಳು ಅಭಿವೃದ್ಧಿಯಾಗುತ್ತವೆ. ರಾಜಕಾರಣಿಗಳಿಗೆ ಸಾರ್ವಜನಿಕರಿಂದ ಹೆಚ್ಚು ಪ್ರಶ್ನೆಗಳು ಬರುವ ಸಾಧ್ಯತೆ ಇದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ಹೆಚ್ಚು ಹಣ ಖರ್ಚು ಮಾಡಲೇಬೇಕಾದ ಅನಿವಾರ್ಯವಿದೆ.

ಕಟಕ ರಾಶಿ:
ನಿಮ್ಮ ವೈಯಕ್ತಿಕ ವಿಚಾರಗಳನ್ನು ಆತ್ಮೀಯರೊಡನೆ ಹಂಚಿಕೊಳ್ಳುವುದರಿಂದ ಮನಸ್ಸಿಗೆ ಸ್ವಲ್ಪ ಪರಿಹಾರವೆನಿಸುತ್ತದೆ. ಮಹಿಳೆಯರು ಸ್ವಲ್ಪ ದಿನ ರಾಜಕೀಯದಿಂದ ದೂರ ಇರುವುದು ಒಳ್ಳೆಯದು. ವಿಶೇಷ ವ್ಯಕ್ತಿಗಳಿಂದ ಪ್ರಭಾವಿತರಾಗಿ ಅವರನ್ನು ಅನುಕರಿಸಲು ಯತ್ನಿಸುವಿರಿ. ಕೆಲಸವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಮರ್ಥ್ಯವನ್ನು ಅರಿತು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಧನಾದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಆತ್ಮಗೌರವ ಸಾಕಷ್ಟು ಇರುತ್ತದೆ. ಸ್ನೇಹಿತರಿಗಾಗಿ ಕಾರ್ಯನಿರ್ವಹಿಸಿ ಸಂತೋಷ ಪಡುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸ್ವಲ್ಪ ತೊಡಕಾಗಬಹುದು. ತಂದೆಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಿರಿ. ಹಳೆಯ ಕಬ್ಬಿಣದ ವಸ್ತುಗಳ ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ.

ಸಿಂಹ ರಾಶಿ:
ಮನೆಯ ನವೀಕರಣ ಕಾರ್ಯಗಳು ಸರಾಗವಾಗಿ ಆಗುವುದು. ಮನೆಗೆ ಅಲಂಕಾರ ವಸ್ತುಗಳನ್ನು ಖರೀದಿ ಮಾಡುವಿರಿ. ಮೀನು ಮುಂತಾದ ಸಮುದ್ರ ಖಾದ್ಯವನ್ನು ಮಾರಾಟ ಮಾಡುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ಹಣಕಾಸಿನ ಸ್ಥಿತಿಯು ಸರಿ ಹೋಗುವಷ್ಟು ಇರುತ್ತದೆ. ತಂದೆ ಮಕ್ಕಳ ನಡುವೆ ಸಾಕಷ್ಟು ವಾಗ್ವಾದ ಆಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಅಸಹನೆಯ ಪ್ರವೃತ್ತಿ ತಪ್ಪು ಅಭಿಪ್ರಾಯಕ್ಕೆ ಮಾರ್ಗ ಮಾಡಿಕೊಡಬಹುದು. ಮೂಳೆಯ ತೊಂದರೆಯಿರುವವರು ಚಿಕಿತ್ಸೆಗೆ ಹೋಗುವುದು ಒಳ್ಳೆಯದು. ಕಟ್ಟಡ ಸಾಮಗ್ರಿಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಏರುಪೇರಾಗಬಹುದು. ಸ್ವಂತ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಸ್ಥಿರಾಸ್ತಿ ಮಾರಾಟದ ಬಗ್ಗೆ ಸಾಕಷ್ಟು ಚಿಂತನೆ ಮಾಡುವಿರಿ.

ಕನ್ಯಾ ರಾಶಿ:
ಗೃಹ ನಿರ್ಮಾಣದ ಬಗ್ಗೆ ಸಾಕಷ್ಟು ಚಿಂತನೆಯನ್ನು ಮಾಡುವಿರಿ. ನೆರೆಹೊರೆಯವರ ಸಂಬಂಧದಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆಯನ್ನು ಕಾಣಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಡವಳಿಕೆಯಲ್ಲಿ ಸ್ವಲ್ಪಮಟ್ಟಿನ ಆಲಸ್ಯವನ್ನು ಕಾಣಬಹುದು. ಕೃಷಿಕರಿಗೆ ಅಭಿವೃದ್ಧಿ ಇರುತ್ತದೆ. ಅವರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಮತ್ತು ಒಳ್ಳೆಯ ಬೆಲೆಯನ್ನು ನಿರೀಕ್ಷೆ ಮಾಡಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಹೆಚ್ಚುತ್ತದೆ. ಸಂಗಾತಿ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಉದ್ಯೋಗ ಸ್ಥಳದಲ್ಲಿ ಮಹಿಳಾ ಹಿರಿಯ ಅಧಿಕಾರಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಶೀಘ್ರ ಗತಿಯನ್ನು ಕಾಣಬಹುದು. ಒಡವೆ ತಯಾರಕರಿಗೆ ಬೇಡಿಕೆ ಹೆಚ್ಚಾಗುತ್ತದೆ.

ತುಲಾ ರಾಶಿ:
ಅನವಶ್ಯಕ ಮಾತುಗಳಲ್ಲಿ ತೊಡಗಿಕೊಳ್ಳದಿರುವುದು ನಿಮಗೆ ಉತ್ತಮ. ಹಣಕಾಸಿನ ವ್ಯವಹಾರಗಳು ಅಷ್ಟು ಲಾಭವನ್ನು ತರಲಾರವು. ಮಕ್ಕಳಿಗೋಸ್ಕರ ವಿದೇಶ ಪ್ರಯಾಣ ಮಾಡಬೇಕಾದ ಸಂದರ್ಭವಿದೆ. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುವುದು ಉತ್ತಮ. ಉದ್ಯೋಗಾಕಾಂಕ್ಷಿಗಳಿಗೆ ಯಥಾಸ್ಥಿತಿ ಮುಂದುವರೆಯುವ ಸಂದರ್ಭವಿದೆ. ಸ್ತ್ರೀಯರಿಗೆ ವೃತ್ತಿಯಲ್ಲಿ ಯಶಸ್ಸು ಇರುತ್ತದೆ. ವೈಯಕ್ತಿಕ ಜೀವನದಲ್ಲಿ ಜಂಜಾಟವಿರುತ್ತದೆ. ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ಅವರ ಮೂಲಕ ನಿಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಚಿತ್ರಕಲಾವಿದರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಬ್ಯಾಂಕಿನ ವ್ಯವಹಾರಗಳಲ್ಲಿ ನಿಮಗೆ ಅನುಕೂಲವಿರುತ್ತದೆ. ನ್ಯಾಯವಾದಿಗಳಿಗೆ ಉತ್ತಮ ದಾವೆಗಳು ದೊರೆತು ಆದಾಯ ಹೆಚ್ಚುತ್ತದೆ.

ವೃಶ್ಚಿಕ ರಾಶಿ:
ಮಾನಸಿಕ ದ್ವಂದ್ವ ನಿಲುವುಗಳಿಂದಾಗಿ ಸ್ವಲ್ಪ ನಷ್ಟ ಅನುಭವಿಸುವಿರಿ. ಶತ್ರುಗಳನ್ನು ಮಣಿಸಲು ಹೊಸ ತಂತ್ರಗಳನ್ನು ಹುಡುಕುವಿರಿ. ಆಸ್ತಿ ವಿಚಾರದಲ್ಲಿ ಸಂತೋಷಕರ ಸುದ್ದಿಗಳು ಕೇಳಿ ಬರುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ದೊರೆತು ಅಧ್ಯಯನ ಮುಂದುವರೆಯುತ್ತದೆ. ಮಕ್ಕಳಿಂದ ಸಾಕಷ್ಟು ಗೌರವ ದೊರೆಯುತ್ತದೆ. ಹರಿತವಾದ ಆಯುಧಗಳಿಂದ ಸ್ವಲ್ಪ ದೂರವಿರುವುದು ಒಳ್ಳೆಯದು. ಸಾಲಗಾರರು ಬಂದು ಸಾಲ ವಾಪಸಾತಿಗಾಗಿ ತಕರಾರು ತೆಗೆಯಬಹುದು. ನಿಮ್ಮ ಸಂಗಾತಿಗಾಗಿ ಚಿನ್ನಾಭರಣಗಳನ್ನು ಕೊಳ್ಳುವ ಸಾಧ್ಯತೆ ಇದೆ. ಹಿರಿಯರು ನಡೆಸುತ್ತಿದ್ದ ವ್ಯಾಪಾರವನ್ನು ಮುಂದುವರಿಸುವುದು ಬಹಳ ಒಳ್ಳೆಯದು. ವೃತ್ತಿಯಲ್ಲಿ ಹಣ ಸಂಪಾದನೆ ಹೆಚ್ಚುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ನಿಮಗೆ ಹೆಚ್ಚಿನ ಮಾನ್ಯತೆ ದೊರೆಯುತ್ತದೆ.

ಧನಸ್ಸು ರಾಶಿ:
ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಅತ್ಯಂತ ಚುರುಕಾಗಿ ಕೆಲಸ ಮಾಡಿ ಎಲ್ಲರ ಗಮನ ಸೆಳೆಯುವಿರಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಸಂಕಷ್ಟದ ಕಾಲ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸರ್ಕಾರಿ ಕೆಲಸಗಳಲ್ಲಿ ಮಂದಗತಿಯನ್ನು ಕಾಣಬಹುದು. ನಿಮ್ಮ ಸಂಗಾತಿಯ ಆದಾಯದಲ್ಲಿ ಸ್ವಲ್ಪ ಮಟ್ಟಿನ ಹೆಚ್ಚಳವನ್ನು ನಿರೀಕ್ಷೆ ಮಾಡಬಹುದು. ತಂದೆಯಿಂದ ನಿಮಗೆ ಹೆಚ್ಚಿನ ನೆರವು ದೊರೆಯುತ್ತದೆ. ವೃತ್ತಿಯಲ್ಲಿ ಏಳಿಗೆ ಕಂಡು ಬಂದು ಆದಾಯವೂ ಹೆಚ್ಚುತ್ತದೆ. ಧಾರ್ಮಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಕೃಷಿಕರಿಗೆ ಆದಾಯ ಕಡಿಮೆಯಾಗುವ ಸಂದರ್ಭವಿದೆ. ಗೃಹ ನಿರ್ಮಾಣಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತವೆ.

ಮಕರ ರಾಶಿ:
ಕಷ್ಟಪಟ್ಟು ವಹಿಸಿಕೊಂಡ ಜವಾಬ್ದಾರಿಯನ್ನು ನಿರ್ವಹಣೆ ಮಾಡುವಿರಿ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಹಿರಿಯರಿಂದ ನಿಮಗೆ ಸಾಕಷ್ಟು ಸಹಾಯ ದೊರೆಯುತ್ತದೆ. ಉದ್ಯೋಗಿಗಳ ಶುಭ ಸಮಾರಂಭಕ್ಕೆ ಹೋಗಿಬರುವ ಸಾಧ್ಯತೆ ಇದೆ. ಸ್ಥಿರಾಸ್ತಿ ಮಾಡುವ ವಿಚಾರದಲ್ಲಿ ಈಗ ಆತುರ ಬೇಡ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಅಭಿವೃದ್ಧಿ ಇರುತ್ತದೆ. ಅನಿರೀಕ್ಷಿತ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬದ ಹಿರಿಯರು ನಡೆಸುವ ವ್ಯವಹಾರಗಳಲ್ಲಿ ನಿಮಗೂ ಪಾಲು ದೊರೆಯುತ್ತದೆ. ಧಾರ್ಮಿಕ ಕೆಲಸ ಕಾರ್ಯ ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ಸಾಂಪ್ರದಾಯಿಕ ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ಕಳಿಸುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಕುಂಭ ರಾಶಿ:
ಒಂದು ರೀತಿಯ ಸಂತೋಷ ನಿಮಗೆ ದೊರೆಯಬಹುದು. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಒಡಹುಟ್ಟಿದವರಿಂದ ಸಮಸ್ಯೆಗಳು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಉಸಿರಾಟದ ತೊಂದರೆ, ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರಿಕೆಯನ್ನು ತೆಗೆದುಕೊಳ್ಳುವುದು ಒಳ್ಳೆಯದು. ಪ್ರೀತಿ-ಪ್ರೇಮದ ಹಿಂದೆ ಓಡುತ್ತಿರುವವರಿಗೆ ನಿರಾಸೆ ಇರುತ್ತದೆ. ಸರ್ಕಾರಿ ಉದ್ದಿಮೆಗಳ ಜೊತೆ ವ್ಯವಹಾರ ಮಾಡುವವರಿಗೆ ಆದಾಯ ಸಾಮಾನ್ಯವಾಗಿರುತ್ತದೆ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿರಿ. ವೃತ್ತಿಯಲ್ಲಿ ಹಿತಶತ್ರುಗಳು ಹೆಚ್ಚಾಗಬಹುದು. ಪುಸ್ತಕ ವ್ಯಾಪಾರಿಗಳಿಗೆ ಲಾಭ ಹೆಚ್ಚಾಗುವ ಸಾಧ್ಯತೆಯಿದೆ. ಕೆಲವರಿಗೆ ಚಿನ್ನಾಭರಣ ಕೊಳ್ಳುವ ಸಾಧ್ಯತೆ ಇದೆ. ಹೊಸ ವಾಹನ ಕೊಳ್ಳುವ ಯೋಗವಿದೆ.

ಮೀನ ರಾಶಿ:
ಹಣದ ಒಳಹರಿವು ಉತ್ತಮವಾಗಿದ್ದರೂ ಸಾಕಷ್ಟು ಖರ್ಚು ಇರುತ್ತದೆ. ದುಡುಕಿನ ಮಾತಿನಿಂದ ಬಂಧುಗಳು ದೂರ ಆಗುವರು. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆ ಮಾಡುವ ಯೋಗವಿದೆ. ಕಣ್ಣಿನ ತೊಂದರೆ ಹಾಗೂ ರಕ್ತದ ತೊಂದರೆ ಇರುವವರು ಶೀಘ್ರ ಚಿಕಿತ್ಸೆಗೆ ಹೋಗುವುದು ಬಹಳ ಉತ್ತಮ. ಸಂಗಾತಿಯ ಆದಾಯದ ಬಗ್ಗೆ ನಿಮಗೆ ತೃಪ್ತಿ ಇರುತ್ತದೆ. ಧಾರ್ಮಿಕ ಸಂಪ್ರದಾಯಗಳಲ್ಲಿ ವ್ಯತ್ಯಾಸವಾಗಿ ನಿಮ್ಮನ್ನು ಪಾಪಪ್ರಜ್ಞೆ ಕಾಡಬಹುದು. ಹಿರಿಯರ ಆಸ್ತಿ ವಿಚಾರದಲ್ಲಿ ಹೆಚ್ಚು ಚರ್ಚೆಗಳಾಗುತ್ತವೆ. ಉದ್ಯೋಗದಲ್ಲಿ ಆಸಕ್ತಿ ಕಡಿಮೆ ಆಗುವ ಲಕ್ಷಣಗಳಿವೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚಾಗಿ ಆದಾಯವೂ ಹೆಚ್ಚುತ್ತದೆ. ತಾಯಿಯೊಡನೆ ಮನಃಸ್ತಾಪ ಹೆಚ್ಚಾಗಬಹುದು. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ.

Leave a Comment

Your email address will not be published. Required fields are marked *