ಸಮಗ್ರ ನ್ಯೂಸ್: ಬಹುಕೋಟಿ ವೆಚ್ಚದಲ್ಲಿ ವಿನೂತನ ರೀತಿ ನಿರ್ಮಿಸಿದ ಕೊಡಗು ಜಿಲ್ಲಾಧಿಕಾರಿ ಕಚೇರಿಯ ಬೃಹತ್ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿದೆ. ಮಂಗಳೂರು ಸಂಚರಿಸುವ ಆ ರಸ್ತೆ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ.
ಮಡಿಕೇರಿ ಪೇಟೆಯ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ರಸ್ತೆ ಬಂದ್ ಮಾಡಿದ್ದಾರೆ. ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ಮತ್ತು ಮಡಿಕೇರಿಗೆ ಮಂಗಳೂರಿನಿಂದ ಬರುವವರು ಮೇಕೆರಿ ತಾಳತ್ತಮನೆ ಅಪ್ಪಂಗಳ ಮಾರ್ಗವಾಗಿ ಸಾಗುವಂತೆ ಸೂಚನೆ ನೀಡಿದ್ದಾರೆ.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ನಿರ್ಮಿಸುತ್ತೀರುವ ಆರ್.ಇ.ವಾಲ್‌ನಲ್ಲಿ ಇತ್ತಿಚೆಗೆ ಸತತವಾಗಿ ಬಿದ್ದ ಭಾರಿ ಮಳೆಯಿಂದಾಗಿ ಕಾಂಕ್ರೀಟ್ ಸ್ಟ್ರಾಬ್‌ನ ಹಿಂಭಾಗ ನೀರು ಇಳಿದಿರುವುದರಿಂದ ಎರಡರಿಂದ ಮೂರು ಕಾಂಕ್ರೀಟ್ ಫ್ಲ್ಯಾಟ್ 1ರಿಂದ ಇಂಚು ಹೊರಭಾಗಕ್ಕೆ ಹಾಗೂ ಒಳಭಾಗಕ್ಕೆ ಸರಿದಿರುವುದು ಕಂಡುಬಂದಿರುತ್ತದೆ. ಇದರಿಂದ ಪೂರ್ಣ ಪ್ರಮಾಣವಾಗಿ ಆರ್.ಇ.ವಾಲ್‌ನ ಕಾಂಕ್ರೀಟ್ ಸ್ಟಾಪ್‌ಗಳು ಕುಸಿದು ಬೀಳುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಗ ಬದಲಾವಣೆಗೆ ನಿರ್ಧರಿಸಲಾಗಿದೆ.