Ad Widget .

ನಾಳೆಯಿಂದ ಅಗತ್ಯ ವಸ್ತುಗಳ ಮೇಲೆ‌ ಜಿಎಸ್ ಟಿ ಬರೆ| ಅಚ್ಚೇದಿನದ ಮತ್ತೊಂದು ಕೊಡುಗೆ ಎಂದ ಗ್ರಾಹಕ

ಸಮಗ್ರ ನ್ಯೂಸ್: ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ದರ ಸದ್ಯ ಕೊಂಚ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ಕೊಂಚ ರಿಲಾಕ್ಸ್ ಆಗಿದ್ದ ದೇಶವಾಸಿಗಳಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ.

Ad Widget . Ad Widget .

ಕೊಂಚ ಸುಧಾರಿಸಿಕೊಳ್ಳುವ ಜೊತೆಗೆ ನಾಳೆಯಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಬರೆ ಬೀಳುತ್ತಿದ್ದು, ದುನಿಯಾ ಮತ್ತಷ್ಟು ದುಬಾರಿಯಾಗಲಿದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಈ ದುಬಾರಿ‌ ತೆರಿಗೆಯಿಂದಾಗಿ ಗ್ರಾಹಕ ಇದೇನಾ ಅಚ್ಚೇದಿನ್ ಎಂದು ಪ್ರಶ್ನಿಸುತ್ತಿದ್ದಾನೆ.

Ad Widget . Ad Widget .

ಯಾವುದೆಲ್ಲಾ ದುಬಾರಿ?

ಪ್ಯಾಕ್ ಮಾಡಿದ ಆಹಾರ ವಸ್ತು. ( ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು) ದುಬಾರಿಯಾಗಲಿವೆ. ಇನ್ನೂ ಎಲ್‌ಇಡಿ ಬಲ್ಬ್, ಲ್ಯಾಂಪ್‌ಗಳ ಮೇಲೂ 18 ಶೇ. ಜಿಎಸ್‌ಟಿ ವಿಧಿಸಲಾಗಿದೆ. ಅಲ್ಲದೇ, ಅಸ್ಪತ್ರೆಯಲ್ಲಿ 5 ಸಾವಿರ ರೂಪಾಯಿ ಮೇಲ್ಪಟ್ಟ ಸ್ಪೆಷಲ್ ವಾರ್ಡ್‌ಗೂ 5% ತೆರಿಗೆ ಬೀಳಲಿದೆ. ಇನ್ನೂ ಚೆಕ್‌ ಬುಕ್‌ ಜಾರ್ಜ್‌ ಕೂಡಾ 18 ಪರ್ಸೆಂಟ್ ಹೆಚ್ಚಾಗಲಿದೆ. 1 ಸಾವಿರ ರೂಪಾಯಿ ಒಳಗಿನ ಹೋಟೆಲ್ ರೂಮ್‌ಗಳಿಗೂ 12 ಪರ್ಸೆಂಟ್ ಜಿಎಸ್‌ಟಿ ಇರಲಿದೆ. ಕ್ಯಾಸಿನೋ, ಆನ್‌ಲೈನ್ ಗೇಮ್ ಆಡೋರಿಗೂ ಟ್ಯಾಕ್ಸ್ ಬರೆ ಬಿದ್ದಿದ್ದು, ಬರೋಬ್ಬರಿ 28 ಪರ್ಸೆಂಟ್ ಜಿಎಸ್‌ಟಿ ಹಾಕಲಾಗಿದೆ.

ಇನ್ನುಳಿದಂತೆ, ಸೋಲಾರ್ ವಾಟರ್ ಹೀಟರ್, ಇಂಕ್, ಚರ್ಮದ ಉತ್ಪನ್ನ, ಟೈಲರಿಂಗ್, ಜವಳಿ ಸೇವೆ, ಬಾಡಿಗೆ ರೂಮ್ ನೀಡುವ ಧಾರ್ಮಿಕ ಕೇಂದ್ರಗಳು, ಬಾಡಿಗೆ ವಿಧಿಸುವ ವಾಣಿಜ್ಯ ಕೇಂದ್ರಗಳಿಗೂ ಟ್ಯಾಕ್ಸ್ ಹೊರೆಬಿದ್ದಿದೆ.

Leave a Comment

Your email address will not be published. Required fields are marked *