ಸಮಗ್ರ ನ್ಯೂಸ್: ಟಯರ್ ಅಂಗಡಿಯೊಂದಕ್ಕೆ ತಡ ರಾತ್ರಿ ಬೆಂಕಿ ತಗುಲಿದ ಪರಿಣಾಮ ಭಾರೀ ನಷ್ಟ ಉಂಟಾಗಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕೂಲಿಶೆಡ್‌ನಲ್ಲಿ ನಡೆದಿದೆ.
ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಚಿಮ್ಮಿತ್ತು. ಟಯರ್, ಟ್ಯೂಬ್ ರಿಪೇರಿ ಮತ್ತು ಮಾರಾಟದ ಅಂಗಡಿಗೆ ಬೆಂಕಿ ತಗುಲಿದ್ದು ಸಮೀಪದ ಗೂಡಂಗಡಿ, ಸೈಕಲ್ ರಿಪೇರಿ ಅಂಗಡಿ, ಹೋಟೆಲ್‌ಗೂ ಹಾನಿಯಾಗಿದೆ.

ಸುಳ್ಯದ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದುಬಂದಿದೆ.