Ad Widget .

ವಿಷಪೂರಿತ ಆಹಾರ ಸೇವನೆಯಿಂದ ಮದರಸಾ ವಿದ್ಯಾರ್ಥಿ ಸಾವು ; ಐದು ಮಂದಿ ಅಸ್ವಸ್ಥ

ಆಂಧ್ರಪ್ರದೇಶ: 12 ವರ್ಷ ಪ್ರಾಯದ ಮದರಸಾ ವಿದ್ಯಾರ್ಥಿ ಮೃತಪಟ್ಟಿದ್ದು, ಐವರು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆಯೊಂದು ಆಂಧ್ರದ ಪಲ್ನಾಡು ಜಿಲ್ಲೆಯ ಗುರಜಾಲ ಮಂಡಲದಲ್ಲಿರುವ ಇಸ್ಲಾಮಿಯಾ ನೂರುಲ್ ಹುದಾ ಮದ್ರಸಾದಲ್ಲಿ ನಡೆದಿದೆ.

Ad Widget . Ad Widget .

ಮದರಸಾ ವಿದ್ಯಾರ್ಥಿ ಮುನ್ನಾ(12) ಮೃತ ಬಾಲಕ.

Ad Widget . Ad Widget .

ತರಕಾರಿ ಸೊಪ್ಪಿನ ಪದಾರ್ಥ ಸೇವಿಸಿದ ಬಳಿಕ ಮುನ್ನಾ ಸಾವನ್ನಪ್ಪಿದ್ದು, ಐವರು ವಿದ್ಯಾರ್ಥಿಗಳು ವಿಷಪೂರಿತ ಆಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿದ್ದಾರೆ.

ಗುರಜಾಲ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ಬಾಬು ಅವರು ಈ‌ ಬಗ್ಗೆ ಪ್ರತಿಕ್ರಿಯಿಸಿದ್ದು, ಮದರಸಾದ ಬಳಿ ಆರು ಮಂದಿ ಮದರಸಾ ವಿದ್ಯಾರ್ಥಿಗಳು ಯಾರೋ ನೀಡಿದ ತರಕಾರಿ ಸೊಪ್ಪಿನ ಪದಾರ್ಥ ಸೇವಿಸಿದ್ದಾರೆ.

ವಿದ್ಯಾರ್ಥಿಗಳು ನಿನ್ನೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಅದನ್ನು ಬಳಸಿದ್ದರು. ಆದರೆ ಉಳಿದದ್ದನ್ನು ಈ ಆರು ವಿದ್ಯಾರ್ಥಿಗಳು ಶನಿವಾರ ಬೆಳಗ್ಗೆ 10:30ಕ್ಕೆ ಸೇವಿಸಿದ್ದಾರೆ ಎಂದು ಹೇಳಿದ್ದಾರೆ. ಆ ಬಳಿಕ ಮಕ್ಕಳಲ್ಲಿ ಅಸ್ವಸ್ಥತೆ ಕಂಡು ಬಂದಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ, ಆದ್ದರಿಂದ ಯಾವುದೇ ಪ್ರಕರಣ ದಾಖಲಾಗಿಲ್ಲ. ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *