ಸಮಗ್ರ ನ್ಯೂಸ್: ಸಕಲೇಶಪುರದ ದೋಣಿಗಲ್ ಬಳಿ ಭೂಕುಸಿತ ಸಂಭವಿಸಿರುವ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜ್ಯಾಂ ಉಂಟಾಗಿದೆ.

ಭಾರೀ ಗಾತ್ರದ ಟ್ರಕ್ಕ್ ಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ. ಇದರಿಂದ ಗುಂಡ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ- ಧರ್ಮಸ್ಥಳ ಪ್ರಯಾಣಿಸುವ ವಾಹನಗಳಿಗೆ ತೊಂದರೆಯುಂಟಾಗಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜ್ಯಾಂ ಉಂಟಾಗಿದೆ. ಅಡ್ಡಹೊಳೆಯಿಂದ ಗುಂಡ್ಯ ಸಕಲೇಶಪುರ ರಸ್ತೆಯ ತುಂಬಾ ಟ್ರಕ್ಕುಗಳು ಸಾಲುಗಟ್ಟಿವೆ