Ad Widget .

ದಲಿತರ ಕಾಲೋನಿಗೆ‌ ಬಂದ ಅನುದಾನ ಬೇರೆಡೆಗೆ ವರ್ಗಾವಣೆ| ಶಾಸಕರೇ ಈ ಕೆಲಸ ‌ಮಾಡಿದ್ದಾರೆ ಎಂದು ಆರೋಪಿಸಿದ ಅಂಬೇಡ್ಕರ್ ರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ದಲಿತರ ಕಾಲೋನಿಗೆ ಬಂದ ಶೌಚಾಲಯ ಮತ್ತು ಸ್ನಾನ ಗೃಹ ಕಟ್ಟಡ ಸ್ಥಳ ಬದಲಾವಣೆಗೆ ಶಾಸಕ ಅಂಗಾರರೇ ಕಾರಣ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪಿಸಿದೆ. ಕಾಲೋನಿಯಲ್ಲಿ ನೂತನ ಕಟ್ಟಡ ಮಾಡಿಕೊಡದಿದ್ದಲ್ಲಿ ಬಿಜೆಪಿ ಕಚೇರಿ ಮುಂದೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

Ad Widget . Ad Widget .

ಉಬರಡ್ಕ ಮಿತ್ತೂರು ಗ್ರಾಮದ ಕೊಡಿಯಾಲಬೈಲು ದಲಿತ ಕಾಲೋನಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡ ನಿರ್ಮಿಸಲು 30 ಲಕ್ಷ ಅನುದಾನ ಬಂದಿದ್ದು, ಬಂದಿರುವ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕಾಲೋನಿ ಬಿಟ್ಟು ಸುಮಾರು ದೂರವಿರುವಂತ ಹಿಂದೂ ರುದ್ರಭೂಮಿಯೊಳಗೆ ಕಟ್ಟಡ ನಿರ್ಮಾಣ ಮಾಡಿ ಗೇಟಿಗೆ ಬೀಗ ಹಾಕಿರುತ್ತಾರೆ.

Ad Widget . Ad Widget .

ಈ ಘಟನೆಗೆ ಸುಳ್ಯ ಶಾಸಕ ಅಂಗಾರ ರವರು ಕಾರಣರಾಗಿದ್ದು, ಶೀಘ್ರದಲ್ಲಿ ಅದೇ 30 ಲಕ್ಷ ರೂಪಾಯಿ ಅನುದಾನದ ನೂತನ ಶೌಚಾಲಯ ಮತ್ತು ಸ್ನಾನ ಗೃಹ ಕಟ್ಟಡವನ್ನು ಕೊಡಿಯಾಲ ಬೈಲು ದಲಿತ ಕಾಲೋನಿಯಲ್ಲಿ ನಿರ್ಮಿಸಿಕೊಡಬೇಕು, ಇಲ್ಲದಿದ್ದಲ್ಲಿ ಬಿಜೆಪಿ ಕಚೇರಿಯ ಮುಂಬಾಗ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಸಕರಾದ ಎಸ್ ಅಂಗಾರವರು ಈಗಿನ ಸಚಿವರು ಒಬ್ಬ ದಲಿತ ಶಾಸಕರಾಗಿ ದಲಿತರಿಗೆ ಈ ರೀತಿ ಅನ್ಯಾಯ ಮಾಡುವುದು ಸರಿಯಲ್ಲ ಸರ್ಕಾರದಿಂದ ಶೌಚಾಲಯ ಮತ್ತು ಸ್ನಾನ ಘಟಕ ಕಟ್ಟಡವನ್ನು ದಲಿತರಿಗೆ ದಿನನಿತ್ಯ ಕೆಲಸಕ್ಕೆ ಉಪಯೋಗಿಸಿಕೊಳ್ಳಲು ಕೊಟ್ಟಂತ ಸರಕಾರ ಇವತ್ತು ದಲಿತ ಜನಾಂಗದ ಯವರಿಗೆ ಉಪಯೋಗ ಆಗದ ಜಾಗದಲ್ಲಿ ನಿರ್ಮಾಣ ಮಾಡಿದ್ದಾರೆ. ಇವತ್ತು ಮೀಸಲಾತಿ ಕ್ಷೇತ್ರದಲ್ಲಿ 35 ವರ್ಷಗಳಿಂದ ಶಾಸಕರಾಗಿ ಈಗ ಸಚಿವರಾಗಿ ಒಂದು ಅಂಬೇಡ್ಕರ್ ಭವನವನ್ನು ಇದುವರೆಗೂ ಸಂಪೂರ್ಣ ಮಾಡಲು ಇವರಿಂದ ಸಾಧ್ಯವಾಗಲಿಲ್ಲ. ಸುಳ್ಯ ಕಸಬಾ ಗ್ರಾಮದಲ್ಲಿ ಹಲವು ದಲಿತರಿಗೆ ಮನೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ದಲಿತರಿಗೆ ನಿಗಮದಿಂದ ಬೋರ್ ವೆಲ್ ಯೋಜನೆ ಬಂದರೆ ಶಾಸಕರ ಸಹಿ ಬೇಕು ಎಂದರೆ ಕಾಂಗ್ರೆಸ್ ಪಕ್ಷದವರಾದರೆ ಸಹಿ ಹಾಕುವುದಿಲ್ಲ ಎಂದು ಬಿಜೆಪಿ ಕಚೇರಿಯಲ್ಲಿ ಹೇಳುತ್ತಾರೆ. ಹಾಗಾದರೆ ದಲಿತ ಸಮುದಾಯದವರು ಎಲ್ಲಿ ಹೋಗಬೇಕು.
ಸಾರ್ವಜನಿಕರ ತೆರಿಗೆಯ ದುಡ್ಡಿನಿಂದ ಸರ್ಕಾರ ನಡೆಯುತ್ತದೆ.
ಯಾರು ಕೂಡ ಅವರ ಜೋಬಿನಿಂದ ಕೊಡುವಂತ ಹಣವಲ್ಲ.
ಆದಕಾರಣ ನಮಗೆ 30 ಲಕ್ಷ ಅನುದಾನದ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಬಂದಿರುವಂತ ಶೌಚಾಲಯ ಮತ್ತು ಸ್ನಾನ ಘಟಕದ ಸಂಕೀರ್ಣ ಕಟ್ಟಡವನ್ನು ಕೊಡಿಯಾಲಬೈಲ್ ದಲಿತ ಕಾಲೋನಿಯಲ್ಲಿ ನಿರ್ಮಿಸಿ ಕೊಡಬೇಕೆಂದು ಮಾನ್ಯ ಸಚಿವರಾದ ಎಸ್ ಅಂಗಾರ ಅವರಿಗೆ ಈ ಮಾಧ್ಯಮದ ಮೂಲಕ ಕೇಳಿಕೊಳ್ಳುತ್ತಿದ್ದೇನೆ. ಒಂದು ವೇಳೆ ನಮ್ಮ ಈ ಬೇಡಿಕೆ ಈಡೇರದಿದ್ದಲ್ಲಿ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಈ ಮೂಲಕ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

Leave a Comment

Your email address will not be published. Required fields are marked *