ಸಿಲಿಂಡರ್ ವಿಚಾರವಾಗಿ ಗಲಾಟೆ;  ತಮ್ಮ, ಅಣ್ಣನಿಗೆ ಚಾಕುವಿನಿಂದ ಇರಿದು ಹಲ್ಲೆ

ಹುಬ್ಬಳ್ಳಿ:  ಸಿಲಿಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ನಡೆದ ಗಲಾಟೆಯಲ್ಲಿ ತಮ್ಮ ಅಣ್ಣನಿಗೆ ಚಾಕುವಿನಿಂದ ಇರಿದು, ಸೆಂಟ್ರಿಂಗ್ ಗನ್’ನಿಂದ ಹಲ್ಲೆ ನಡೆಸಿದ ಪ್ರಕರಣ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Ad Widget ... ..

ಮುನ್ನಾ ಶಿಗ್ಗಾಂವ (27) ಹಲ್ಲೆಗೆ ಒಳಗಾಗಿದ್ದು, ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Ad Widget

ರಿಯಾಜ್ ಹಾಗೂ ಅನ್ವರ್ ಆರೋಪಿಗಳಾಗಿದ್ದು ಬಂಧಿಸಲಾಗಿದೆ.
ಕಸ್ತೂರಬಾ ನಗರದ ತಾಯಿ ಮನೆಯಲ್ಲಿದ್ದ ಸಿಲಿಂಡರ್’ನ್ನು ತೆಗೆದುಕೊಂಡು ಹೋಗಲು ಬಂದಿದ್ದ ಮುನ್ನಾ ತಾಯಿ ಜೊತೆಗೆ ಜಗಳ ಮಾಡಿ ಹಲ್ಲೆಗೆ ಮುಂದಾಗಿದ್ದಾನೆ.

ಈ ವೇಳೆ ತಮ್ಮ ರಿಯಾಜ್ ಹಾಗೂ ಅನ್ವರ್ ಎಂಬುವವರು ಚಾಕು ಹಾಗೂ ಸೆಂಟ್ರಿಂಗ್ ಗನ್ ನಿಂದ ಮುನ್ನಾ ಮೇಲೆ ಹಲ್ಲೆ ಮಾಡಿದ್ದಾರೆ.

Leave a Comment

Your email address will not be published. Required fields are marked *