Ad Widget .

ಯೋಧನ ಪಾದ ಸ್ಪರ್ಶಿಸಿದ ಪುಟಾಣಿ| ಮಗುವಿನ ಮುಗ್ದ ನಡೆಗೆ ವ್ಯಾಪಕ ಪ್ರಶಂಸೆ

ಸಮಗ್ರ ನ್ಯೂಸ್: ಸೈನಿಕರು ಅಂದರೆ ಅದೇನೋ ಪ್ರೀತಿ, ಗೌರವ ಪ್ರತಿಯೊಬ್ಬ ಭಾರತೀಯನಿಗೂ ಇರುತ್ತದೆ. ಪುಟ್ಟ ಬಾಲಕಿಯೊಬ್ಬಳು ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಸೇನಾ ಸಿಬ್ಬಂದಿಯ ಪಾದಗಳನ್ನು ಸ್ಪರ್ಶಿಸಿದ್ದಾಳೆ. ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾಳೆ. ಆ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

Ad Widget . Ad Widget .

ಸೇನಾ ಸಿಬ್ಬಂದಿ ಕಾಲಿಗೆ ನಮಸ್ಕರಿಸಿದ ಪುಟಾಣಿ
ಮೆಟ್ರೋ ನಿಲ್ದಾಣದಲ್ಲಿ ಮಾವರು ಸೇನಾ ಸಿಬ್ಬಂದಿ ನಿಂತಿರುತ್ತಾರೆ. ಆಗ ಪುಟಾಣಿ ಬಾಲಕಿಯೊಬ್ಬಳು ಅವರತ್ತ ಓಡಿ ಹೋಗುತ್ತಾಳೆ. ಆಗ ಓರ್ವ ಸಿಬ್ಬಂದಿ ಆ ಮಗುವನ್ನು ಮಾತನಾಡಿಸುತ್ತಾ ಇರುತ್ತಾನೆ. ತಕ್ಷಣವೇ ಆಕೆ ಆತನ ಪಾದಗಳನ್ನು ಸ್ಪರ್ಶಿಸುತ್ತಾಳೆ. ಆಗ ಸಿಬ್ಬಂದಿಗೆ ಏನೂ ತೋಚದೆ ಪ್ರೀತಿಯಿಂದ ಮಗುವಿನ ಕೆನ್ನೆ ಮುಟ್ಟಿ ನಗುತ್ತಾನೆ.

Ad Widget . Ad Widget .

ಪುಟ್ಟ ಮಗುವೊಂದು ಸೇನಾ ಸಿಬ್ಬಂದಿ ಕಾಲಿಗೆ ಬೀಳುತ್ತಿರುವ ವಿಡಿಯೋವನ್ನು ಸಂಸದ ಪಿ.ಸಿ ಮೋಹನ್ ಅವರು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. “ಈ ಮಹಾನ್ ರಾಷ್ಟ್ರಕ್ಕೆ ದೇಶಭಕ್ತ ಯುವ ಮನಸ್ಸುಗಳನ್ನು ಬೆಳೆಸುವುದು, ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ” ಎಂದು ಪಿಸಿ ಮೋಹನ್ ಅವರು ಶೀರ್ಷಿಕೆ ನೀಡಿದ್ದಾರೆ.

ಸಂಸದ ಪಿ.ಸಿ ಮೋಹನ್ ಅವರು ಟ್ವಿಟರ್ ನಲ್ಲಿ ಮುದ್ದು ಬಾಲಕಿಯ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ವಿಡಿಯೋ ನೋಡಿ ಖುಷಿ ಪಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ದೇಶದ ಬಗ್ಗೆ ಎಷ್ಟೊಂದು ಗೌರವ. ವಿಡಿಯೋ ನೋಡುತ್ತಿದ್ರೆ ಗೂಸ್ಬಂಪ್ಸ್ ಬಂತು. ಅವರ ತಂದೆ-ತಾಯಿ ನಿಜಕ್ಕೂ ಪುಣ್ಯವಂತರು. ನಮಗೂ ರೀತಿಯ ಮಗು ಹುಟ್ಟಲಿ, ಇದು ಹೃದಯ ಸ್ಪರ್ಶಿ ವಿಡಿಯೋ, ಕಣ್ಣುಗಳಲ್ಲಿ ಸಂತೋಷದ ಕಣ್ಣೀರು ಬಂತು. ಸೈನಿಕರ ಬಗ್ಗೆ ಇಷ್ಟೊಂದು ಗೌರವ ಇಟ್ಟುಕೊಂಡಿರುವ ಮಗುವಿದೆ ದೇವರು ಒಳ್ಳೆಯದು ಮಾಡಲಿ ಎಂದು ಕಾಮೆಂಟ್‍ಗಳನ್ನು ಹಾಕಿದ್ದಾರೆ.

Leave a Comment

Your email address will not be published. Required fields are marked *