Ad Widget .

ಮಳೆಗೆ ನಲುಗಿದ‌ ಮಹಾರಾಷ್ಟ್ರ| ಶತಕ ದಾಟಿದ ಸಾವಿನ ಸಂಖ್ಯೆ; ಜನಜೀವನ ಅಸ್ತವ್ಯಸ್ಥ

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಮಳೆಯಿಂದಾದ ಅನಾಹುತದಿಂದಾಗಿ ಸಾವಿನ ಸಂಖ್ಯೆ 100ರ ಗಡಿ ದಾಟಿದೆ. ಜೂನ್​ 1 ರಿಂದ ಈವರೆಗೆ 102 ಮಂದಿ ಮೃತಪಟ್ಟಿದ್ದು, ನಿನ್ನೆ ಒಂದೇ ದಿನದಲ್ಲಿ ಮೂವರು ಮೃತಪಟ್ಟಿರುವುದು ವರದಿಯಾಗಿದೆ.

Ad Widget . Ad Widget .

ಬುಲ್ಧಾನಾ, ನಾಸಿಕ್​ ಮತ್ತು ನಂದುಬಾರ್​ ಜಿಲ್ಲೆಯಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ.

Ad Widget . Ad Widget .

ಭೂ ಕುಸಿತ, ಮರಗಳು ಉರುಳಿ ಹಲವರು ತಮ್ಮ ಪ್ರಾಣ ಕಳೆದುಕೊಂಡಿದ್ದು, 20 ಹಳ್ಳಿಗಳು ಸಂಪೂರ್ಣ ಜಲಾವೃತಗೊಂಡಿದ್ದು, ಹಳ್ಳಿಗಳಲ್ಲಿರುವ ಮನೆಗಳು ಸಹ ಕಾಣಿಸದಷ್ಟು ನೀರು ತುಂಬಿಕೊಂಡಿದೆ. ಈ ನಡುವೆ ಎನ್​ಡಿಆರ್​ಎಫ್​ ತಂಡ ಜನರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುಲಾಗುತ್ತಿದೆ.

ಈ ನಡುವೆ ರಸ್ತೆ ಹಾಗೂ ರೈಲು ಸಂಚಾರಕ್ಕೂ ಅಡ್ಡಿಯಾಗಿದ್ದು, ಮಳೆಯಿಂದಾಗಿ ಕೆಲವೆಡೆ ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

Leave a Comment

Your email address will not be published. Required fields are marked *