Ad Widget .

ಆತನ ಜೊತೆಗಿದ್ದು ಸಂಬಂಧ ಕೆಟ್ಟಾಗ ಅತ್ಯಾಚಾರ ಮಾಡ್ದ ಅಂತ ಹೇಳೋಹಾಗಿಲ್ಲ – ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ಮಹಿಳೆ ತಾನು ಇಷ್ಟಪಟ್ಟು ಪುರುಷನ ಜೊತೆಗಿದ್ದು, ಸಂಬಂಧ ಕೆಟ್ಟ ಮೇಲೆ ಅತ್ಯಾಚಾರವಾಯ್ತು ಎಂದು ದೂರು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪಿತ್ತಿದೆ.

Ad Widget . Ad Widget .

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ‌ನಡೆಸಿದ ಕೋರ್ಟ್ ಈ ನಿರ್ಧಾರ ಪ್ರಕಟಿಸಿದೆ. ಆರೋಪಿ ಅನ್ಸಾರ್ ಮೊಹಮ್ಮದ್ ಎಂಬಾತ ತಮ್ಮ ವಿರುದ್ಧ ಸಲ್ಲಿಕೆ ಆಗಿರುವ ಅತ್ಯಾಚಾರ ಆರೋಪದ ಕುರಿತಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿಗೆ ಸಂಬಂಧಿತ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ವಿಕ್ರಮ್​ನಾಥ್ ಅವರಿದ್ದ ಪೀಠ, ಮೇಲಿನ ತೀರ್ಪು ನೀಡಿ, ಜಾಮೀನು ಮಂಜೂರು ಮಾಡಿದೆ.

Ad Widget . Ad Widget .

ದೂರುದಾರ ಮಹಿಳೆಯು ಅನ್ಸಾರ್​ ಮೊಹಮ್ಮದ್​ನೊಂದಿಗೆ ಇಷ್ಟಪಟ್ಟೇ ಜತೆಗಿದ್ದರು. ಆದರೆ ಈಗ ಇಬ್ಬರ ನಡುವಿನ ಸಂಬಂಧ ಹದೆಗೆಟ್ಟಿದೆ ಎಂಬ ಕಾರಣಕ್ಕೆ ಸೆಕ್ಷನ್​ 376(2)ರ ಪ್ರಕಾರ ಎಫ್​ಐಆರ್ ದಾಖಲು ಮಾಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ, ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ರಾಜಸ್ಥಾನ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ. 25 ವರ್ಷದ ಮಹಿಳೆ ಈ ಪ್ರಕರಣದಲ್ಲಿ ದೂರುದಾರರಾಗಿದ್ದು, ಅನ್ಸಾರ್ ಜತೆ ನಾಲ್ಕು ವರ್ಷದಿಂದ ಸಂಬಂಧ ಹೊಂದಿದ್ದರು.

Leave a Comment

Your email address will not be published. Required fields are marked *