Ad Widget .

ನಟ ಪ್ರತಾಪ್ ಅವರು ಚೆನ್ನೈ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆ

ಮಲಯಾಳಂ ಚಿತ್ರರಂಗದಲ್ಲಿ ನಟ ಮತ್ತು ನಿರ್ದೇಶಕನಾಗಿ ತೊಡಗಿಸಿಕೊಂಡಿರುವ ನಟ ಪ್ರತಾಪ್ ಪೋಥೆನ್ ಚೆನ್ನೈ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Ad Widget . Ad Widget .

69 ವರ್ಷದ ನಟ ಸುಮಾರು 12 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಎಂದಿನಂತೆ ಮನೆ ಕೆಲಸ ಮಾಡಲು ಕೆಲಸದವರು ಬಂದಾಗ ಪ್ರತಾಪ್ ಪೋಥೆನ್ ಮೃತ ದೇಹವನ್ನು ಬೆಡ್‌ರೂಮ್‌ನಲ್ಲಿ ನೋಡಿ ಶಾಕ್ ಆಗಿದ್ದಾರೆ.

Ad Widget . Ad Widget .

100ಕ್ಕೂ ಹೆಚ್ಚು ಮಲಯಾಳಂ, ಹಿಂದಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಪ್ರತಾಪ್ ಪೋಥೆನ್ ಅಭಿನಯಿಸಿದ್ದಾರೆ. 1979ರಲ್ಲಿ ಆರವ್‌ ಸಿನಿಮಾ ಮೂಲಕ ಪ್ರತಾಪ್ ಪೋಥೆನ್ ಅವರನ್ನು ಭರತ್ ಚಿತ್ರರಂಗಕ್ಕೆ ಕರೆ ತಂದರು. 1980ರಲ್ಲಿ ಲೋರಿ ಮತ್ತು ಚಮರಮ್ ಸಿನಿಮಾದಲ್ಲಿ ಪ್ರತಾಪ್ ಹೆಚ್ಚಿನ ಗಮನ ಸೆಳೆದ್ದರು.

ಮೂಲತಃ ತಿರುವನಂತಪುರಂನವರಾಗಿರುವ ಪ್ರತಾಪ್ ಓದಿದ್ದು ಊಟಿ ಬೋರ್ಡಿಂಗ್ ಸ್ಕೂಲ್‌ನಲ್ಲಿ ಮತ್ತು ಮಲಬಾರ್ ಕ್ರಿಸ್ಚಿಯನ್‌ ಕಾಲೇಜ್‌ನಲ್ಲಿ. ಮುಂಬೈನ ಪ್ರೈವೇಟ್‌ ಫರ್ಮ್‌ನಲ್ಲಿ ಕೆಲಸ ಮಾಡಿದ ನಂತರ ಪ್ರತಾಪ್‌ ಅಲ್ಲಿಯೇ ರಂಗಭೂಮಿಗೆ ಸೇರಿಕೊಂಡು ನೂರಾರು ನಾಟಕ ಪ್ರದರ್ಶನಗಳನ್ನು ನೀಡಿದ್ದಾರೆ.

ರಂಗಭೂಮಿಯಲ್ಲಿ ಭರತ್‌ರನ್ನು ಭೇಟಿ ಮಾಡಿದ್ದು, ಅದೇ ಅವರ ಜೀವನಕ್ಕೆ ಬಿಗ್ ಟರ್ನಿಂಗ್ ಪಾಯಿಂಟ್‌ ಎನ್ನಬಹುದು.

ಮಲಯಾಳಂಗಿಂತ ತಮಿಳಿನಲ್ಲಿ ಪ್ರತಾಪ್‌ ಹೆಚ್ಚಿನ ಸಿನಿಮಾ ಆಫರ್‌ ಪಡೆದುಕೊಂಡಿರು. 1987ರಲ್ಲಿ ಋತುಬೇದಮ್ ಸಿನಿಮಾ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡರು.

ಆನಂತರ ಡೈಸಿ , ಜೀವಾ, ಏತ್ರಿ ಏತ್ರಿ, ಸೀವಲಪೇರಿ ಪಂಡಿ ಮತ್ತು ಲಕ್ಕಿ ಮ್ಯಾನ್ ಹೆಸರಿನ ಸೂಪರ್ ಹಿಟ್ ಸಿನಿಮಾ ನಿರ್ದೇಶನ ಮಾಡಿದ್ದಾರೆ.

Leave a Comment

Your email address will not be published. Required fields are marked *