Ad Widget .

ಸವಣೂರು: ಎರಡು ತಿಂಗಳ ಹಿಂದೆ ಖರೀದಿಸಿದ್ದ ಕಾರು ಬೆಂಕಿಗಾಹುತಿ

ಸಮಗ್ರ ನ್ಯೂಸ್: ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಹೊತ್ತಿ ಉರಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಸಮೀಪ ಗದಗ-ಹಾವೇರಿ ರಾಷ್ಟ್ರೀಯ ಹೆದ್ದಾರಿ- 4ರಲ್ಲಿ ನಡೆದಿದೆ. ಗದಗ ನಗರದ ನಿವಾಸಿ ವಿಕ್ರಂ ಬಾಪನಾ ಹಿರಾಚಂದ್‌ ಅವರಿಗೆ ಸೇರಿದ ಕಾರು ಎಂದು ತಿಳಿದು ಬಂದಿದೆ.

Ad Widget . Ad Widget .

ಚಾಲಕ ಸೇರಿ ಮೂವರು ಪ್ರಯಾಣಿಸುತ್ತಿದ್ದು ಪ್ರಯಾಣ ಮಾಡುತ್ತಿದ್ದು ಈ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಕಾಏಕಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತುಕೊಂಡು ತಕ್ಷಣ ರಸ್ತೆ ಬದಿಗೆ ಕಾರು ನಿಲ್ಲಿಸಿ, ಮೂವರು ಪ್ರಯಾಣಿಕರು ಕೆಳಗಿಳಿಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಉರಿಯಲು ಪ್ರಾರಂಭಿಸಿದೆ. ಕಾರು ಖರೀದಿಸಿ 2 ತಿಂಗಳಾಗಿತ್ತು ಎನ್ನಲಾಗಿದೆ.

Ad Widget . Ad Widget .

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬರುವ ವೇಳೆಗೆ ಕಾರು ಸುಟ್ಟು ಕರಕಲಾಗಿತ್ತು. ಈ ಘಟನೆ ಸವಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಿಎಸ್‌ಐಗಳಾದ ಮೇಘರಾಜ ದೊಡ್ಡಮನಿ ಮತ್ತು ಎಸ್‌.ಡಿ.ಸಾಗರ್‌ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *